ಹಿಗ್ಗಾಮುಗ್ಗಾ ಥಳಿಸಿದ ಕಂಡಕ್ಟರ್

ಹಿಗ್ಗಾಮುಗ್ಗಾ ಥಳಿಸಿದ ಕಂಡಕ್ಟರ್

ಧಾರವಾಡ, ಆ. 30: ಕೆಎಸ್ಆರ್ಟಿಸಿ ನಿರ್ವಾಹಕನೊಬ್ಬ ವೃದ್ಧನ ಮೇಲೆ ಗೂಂಡಾವರ್ತನೆ ತೋರಿದ ಘಟನೆ ಧಾರವಾಡದಲ್ಲಿ ನಡೆದಿದೆ. ಹಳಿಯಾಳ-ಚುಂಚವಾಡ ಮಾರ್ಗದ ಬಸ್ನಲ್ಲಿ ಹಿರಿಯ ನಾಗರಿಕರ ರಿಯಾಯಿತಿ ಬಸ್ ಪಾಸ್ ಸಂಬಂಧ ವೃದ್ಧ , ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಸ್ ಅಳ್ನಾವರ ಬಸ್ ನಿಲ್ದಾಣಕ್ಕೆ ಬರ್ತಿದ್ದಂತೆಯೇ ಸಿಟ್ಟಿಗೆದ್ದ ಕಂಡಕ್ಟರ್ ವೃದ್ಧನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ವೃದ್ಧ ಓಡಿ ಹೋದರೂ ಬಿಡದೇ ಅಟ್ಟಿಸಿಕೊಂಡು ಬಂದು ಕಂಡಕ್ಟರ್ ಗೂಂಡಾಗಿರಿ ಮೆರೆದಿದ್ದಾನೆ. ಪೊಲೀಸ್ ಠಾಣೆ ಎದುರಿನಲ್ಲೇ ಇರುವ ಬಸ್ ನಿಲ್ದಾಣದಲ್ಲಿ ಕಂಡಕ್ಟರ್ ಪೌರುಷ ಸಖತ್ ವೈರಲ್ ಆಗಿದೆ.

ಫ್ರೆಶ್ ನ್ಯೂಸ್

Latest Posts

Featured Videos