ಹೆತ್ತವರನ್ನು ಹೊರ ಹಾಕುವಂತಿಲ್ಲ

ಹೆತ್ತವರನ್ನು ಹೊರ ಹಾಕುವಂತಿಲ್ಲ

ಪಟ್ನಾ: ವಯಸ್ಸಾದ ತಮ್ಮ ಹೆತ್ತವರನ್ನು ಹೊರ ಹಾಕುವಂತಿಲ್ಲ; ಅವರಿಗೆ ಸೂಕ್ತವಾದ ರಕ್ಷಣೆ, ಆರೋಗ್ಯ ಚಿಕಿತ್ಸೆ, ನೆಮ್ಮದಿ ನೀಡುವ ಕಾನೂನುಬದ್ಧ ಹೊಣೆಗಾರಿಕೆ ಮಕ್ಕಳದ್ದಾಗಿರುತ್ತದೆ.

ನೋಡಿಕೊಳ್ಳದವರಿಗೆ ಬಿಹಾರದಲ್ಲಿನ್ನು ಜೈಲು ಶಿಕ್ಷೆಯಾಗಲಿದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸರಕಾರದ ಈ ಪ್ರಸ್ತಾವಿತ ಕ್ರಮ ಜಾರಿಗೆ ಬಂದಲ್ಲಿ ರಾಜ್ಯದಲ್ಲಿ ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಗುರಿಯಾಗಿ ವಸ್ತುತಃ ಬೀದಿಗೆ ಬೀಳುವ ದುರಂತಕ್ಕೆ ಗುರಿಯಾಗುವ ಹಿರಿಯ ನಾಗರಿಕರಿಗೆ ಆಸರೆ ಮತ್ತು ನೆಮ್ಮದಿ ಪ್ರಾಪ್ತವಾಗಲಿದೆ. ಬಿಹಾರ ಸಚಿವ ಸಂಪುಟ ಒಟ್ಟು 17 ಪ್ರಸ್ತಾವಗಳಿಗೆ ಅನುಮೋದನೆ ನೀಡಿದೆ.  ವಯಸ್ಸಾದ ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದೆ, ನಿರ್ಲಕ್ಷಿಸುವವರಿಗೆ ಜೈಲು ಶಿಕ್ಷೆ ನೀಡಬೇಕೆಂಬ ಶಿಫಾರಸು ಇದೆ ಎಂದು ಮೂಲ ತಿಳಿಸಿವೆ.

ಫ್ರೆಶ್ ನ್ಯೂಸ್

Latest Posts

Featured Videos