ಡಿಕೆಶಿ ರೋಡ್‌ ಶೋ ಮೂಲಕ ಮತ ಬೇಟೆ

ಡಿಕೆಶಿ ರೋಡ್‌ ಶೋ ಮೂಲಕ ಮತ ಬೇಟೆ

ಕೆ.ಆರ್.ಪುರ, ನ. 29: ಕಾಂಗ್ರೆಸ್ ಪಕ್ಷಕ್ಕೆ ಬೈರತಿ ಬಸವರಾಜ್ ಮೋಸ ಮಾಡಿದ್ದು, ತನ್ನ ಸ್ವಾರ್ಥಕ್ಕಾಗಿ ಕ್ಷೇತ್ರದ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ದೂರಿದರು.

ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣ ಸ್ವಾಮಿ ಪರ ರೋಡ್ ಶೋ ಮೂಲಕ ಭರ್ಜರಿ ಪ್ರಚಾರ ಕೈಗೊಂಡ ಅವರು ಮಾತನಾಡಿದರು. ಉಪಚುನಾವಣೆಲ್ಲಿ ಕೆ.ಆರ್ ಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂ.ನಾರಾಯಣ ಸ್ವಾಮಿ ಹೆಚ್ಚಿನ ಮತಗಳು ಪಡೆದು ಆಯ್ಕೆ ಯಾಗಲಿದ್ದಾರೆ ಎಂದರು.

ಮಾಜಿ ಸಚಿವ ಎ.ಕೃಷ್ಣಪ್ಪ ಅವರಿಗೆ ಟಿಕೆಟ್ ತಪ್ಪಿಸಿ ಬೈರತಿ ಬಸವರಾಜ್ ಗೆ ಟಿಕೆಟ್ ನೀಡಿದ್ದರಿಂದ ಅವರು ಜೆಡಿಎಸ್ ಹೋಗುವಂತೆ ಆಯ್ತು, ಎ.ಕೃಷ್ಣಪ್ಪ ಅವರ ಸಾವಿಗೆ ಬೈರತಿ ಬಸವರಾಜು ಸಹ ಕಾರಣರಾದರು ಎಂದರು.

ಬೈರತಿ ಬಸವರಾಜ್ ಗೆ ಕಾಂಗ್ರೆಸ್ ಪಕ್ಷ ಏನು ಮೋಸ ಮಾಡಿದೆ ಎಂದು ಪ್ರಶ್ನೆ ಮಾಡಿದರು. ಮೈತ್ರಿ ಸರ್ಕಾರ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಕೇವಲ‌ ಒಂದು‌ ಜಾತಿ ಒಂದು ವರ್ಗಕ್ಕೆ ಚುನಾವಣೆ ಮಾಡೊಲ್ಲ. ರಾಜೀನಾಮೆ ಕೊಡುವ ಮುಂಚೆ ಮತದಾರರನ್ನು ಕೇಳಿ ಕೊಟ್ರ?.. ಹೆತ್ತ ತಾಯಿಗೆ ಆಶ್ರಯ ನೀಡಿದ ಮನೆಗೆ ದ್ರೋಹ ಮಾಡಿ‌ ಹೋಗಿದ್ದಾರೆ. ಸುಪ್ರೀಂ ಕೋರ್ಟ್ ಅನರ್ಹತೆಯನ್ನು ಎತ್ತಿ ಹಿಡಿದಿತ್ತು ಎಂದು ಅನರ್ಹರ ವಿರುದ್ದ ಗುಡಿಗಿದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಮೈತ್ರಿ ಸರ್ಕಾರದ ಪಥನಕ್ಕೆ ಕಾರಣರಾದ ಅನರ್ಹ ಶಾಸಕರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರದಲ್ಲಿ ಎಂ.ನಾರಾಯಣ ಸ್ವಾಮಿ ಆಯ್ಕೆಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.

ಇದೇ ಸಂರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಮಾತನಾಡಿ, ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಪರ ಇದ್ದು, ಅನರ್ಹ ಶಾಸಕರಿಗೆ ಪಾಠ ಕಲಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಜೆ ಜಾರ್ಜ್‌, ಮಾಜಿ ನಗರ ಸಭಾ ಅದ್ಯಕ್ಷ ಡಿ.ಕೆ.ಮೋಹನ್ ಬಾಬು, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮಂಜು, ಪಾಲಿಕೆ ಸದಸ್ಯರಾದ ಮಂಜುನಾಥ್, ರಾಧಮ್ಮ ವೆಂಕಟೇಶ್, ಮುಖಂಡರಾದ ಕಲ್ಕರೆ ನಾರಾಯಣಸ್ವಾಮಿ, ಪ್ರಸಾದ್ ರೆಡ್ಡಿ ಸೇರಿದಂತೆ ಮುಂತಾದವರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos