ವಿಶ್ವಸಂಸ್ಥೆಯಲ್ಲೂ ಹಣ ಖಾಲಿ!

ವಿಶ್ವಸಂಸ್ಥೆಯಲ್ಲೂ ಹಣ ಖಾಲಿ!

ವಾಷಿಂಗ್ಟನ್, ಅ. 9 : ವಿಶ್ವಸಂಸ್ಥೆ ಕಡೆಯಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಭಾರತ ಆರ್ಥಿಕ ಕುಸಿತ ಎದುರಿಸುತ್ತಿರುವ ಬೆನ್ನಲ್ಲೇ ವಿಶ್ವಸಂಸ್ಥೆಯು ಕೂಡ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಹೇಳಿದ್ದಾರೆ.
ವಿಶ್ವಸಂಸ್ಥೆ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು ಈ ತಿಂಗಳ ಕೊನೆಯೊಳಗೆ ಬೊಕ್ಕಸ ಬರಿದಾಗುವ ಭೀತಿ ಎದುರಾಗಿದೆ. 1610 ಕೋಟಿ ರೂಪಾಯಿ ಕೊರತೆಯಿದೆ ಎಂದು ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಕಾರ್ಯಾಲಯ ಸುಮಾರು 37,000 ನೌಕರರಿಗೆ ಬರೆದ ಪತ್ರದಲ್ಲಿ ಹೇಳಿದೆ. ಸೆ. ಕೊನೆ ಹೊತ್ತಿಗೆ 1610 ಕೋಟಿ ರೂ. ಕೊರತೆಯಾಗಿದೆ. ತಾತ್ಕಾಲಿಕ ತುರ್ತು ನಿಧಿ ಕೂಡ ತಿಂಗಳ ಕೊನೆಗೆ ಬರಿದಾಗುವ ಸಂಭವವಿದೆ ಎಂದು ಗುಟೆರಸ್ ಆತಂಕ ವ್ಯಕ್ತಪಡಿಸಿದ್ದಾರೆ.
ನಗದು ಕೊರತೆ ಸಮಸ್ಯೆ ಪರಿಹರಿಸಲು ಹಣ ನೀಡುವಂತೆ ಸದಸ್ಯ ರಾಷ್ಟ್ರಗಳಿಗೆ ಮಾಡಿದ ಮನವಿಯನ್ನು ಅವು ತಳ್ಳಿಹಾಕಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos