‘ವಿಶ್ವಕಪ್’ ಗೆಲ್ಲುವುದೇ ಇಂಗ್ಲೆಂಡ್ ಗುರಿ

‘ವಿಶ್ವಕಪ್’ ಗೆಲ್ಲುವುದೇ ಇಂಗ್ಲೆಂಡ್ ಗುರಿ

ಲಂಡನ್‌ , ಮೇ.23, ನ್ಯೂಸ್ಎಕ್ಸ್ ಪ್ರೆಸ್: ಆಸ್ಟ್ರೇಲಿಯ ತಂಡವು ವಿಶ್ವಕಪ್‌ಗೆ ತನ್ನ ರೆಟ್ರೋ ಜೆರ್ಸಿಯನ್ನು ತೊಡಲು ನಿರ್ಧರಿಸಿದೆ. ಆತಿಥೇಯ ಇಂಗ್ಲೆಂಡ್‌ ಕೂಟ 1992ರ ವಿಶ್ವಕಪ್‌ನಲ್ಲಿ ತೊಟ್ಟಿದ್ದ ಜರ್ಸಿಯನ್ನು ಈ ಬಾರಿ ಧರಿಸಿ ವಿಶ್ವಕಪ್‌ ಕಣಕ್ಕೆ ಇಳಿಯಲು ಸಜ್ಜಾಗಿದೆ.  1992ರಲ್ಲಿ ಇಂಗ್ಲೆಂಡ್‌ ತಂಡವು ಫೈನಲ್‌ ಪ್ರವೇಶಿಸಿತ್ತು. ಈ ಬಾರಿ ತವರಿ ನಲ್ಲಿ ವಿಶ್ವಕಪ್‌ ನಡೆಯುವುದರಿಂದ ಪ್ರಶಸ್ತಿ ಗೆಲ್ಲುವುದು ಇಂಗ್ಲೆಂಡಿನ ಯೋಜನೆಯಾಗಿದೆ.

1992ರಲ್ಲಿ ಧರಿಸಿದ್ದ ಆಕಾಶ ನೀಲಿ ಬಣ್ಣದ ಜರ್ಸಿಯನ್ನು ಧರಿಸಲು ಇಂಗ್ಲೆಂಡ್‌ ನಿರ್ಧರಿಸಿದೆ. 1992ರಲ್ಲಿ ಇಂಗ್ಲೆಂಡ್‌ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿತ್ತು, ಆದರೆ ಫೈನಲ್‌ನಲ್ಲಿ ಪಾಕಿಸ್ಥಾನದ ವಿರುದ್ಧ ಸೋಲನುಭವಿಸಿ ರನ್ನರ್‌ ಆಪ್‌ಗೆ ತೃಪ್ತಿಪಟ್ಟುಕೊಂಡಿತು. ಹೊಸ ಜೆರ್ಸಿ ಬಿಡುಗಡೆಗೊಳಿಸಿ ಟ್ವೀಟ್‌ ಮಾಡಿರುವ ಇಂಗ್ಲೆಂಡ್‌ ತಂಡದ ಫೋಟೊಗಳು ವೈರಲ್‌ ಆಗಿವೆ. ಇಂಗ್ಲೆಂಡ್‌ ಮೇ 30ರಂದು ವಿಶ್ವಕಪ್‌ ಉದ್ಘಾಟನ ಪಂದ್ಯದಲ್ಲಿ ದ.ಆಫ್ರಿಕಾದ ವಿರುದ್ಧ ಆಡಲಿದೆ.

ಫ್ರೆಶ್ ನ್ಯೂಸ್

Latest Posts

Featured Videos