ವಿಶ್ವದ ರೋಬೋಟ್ ‘ಸೋಫಿಯಾ’

ವಿಶ್ವದ ರೋಬೋಟ್ ‘ಸೋಫಿಯಾ’

ಭೋಪಾಲ್, ಅ. 6 : ವಿಶ್ವದ ಮೊದಲ ರೋಬೋಟ್ ಸಿಟಿಜನ್ ‘ಸೋಫಿಯಾ’ ಮೊದಲ ಬಾರಿಗೆ ಭಾರತಕ್ಕೆ ಆಗಮಿದ್ದು, ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಹವಾಮಾನ ವೈಪರಿತ್ಯ ಹಾಗೂ ಇಂಧನ ಸಂರಕ್ಷಣೆ ಕುರಿತು ಭಾಷಣ ಮಾಡಿದೆ. ಈ ಕಾರ್ಯಕ್ರಮವನ್ನು ಎಮರಾಲ್ಡ್ ಹೈಟ್ಸ್ ಇಂಟರ್ ನ್ಯಾಷನಲ್ ಶಾಲೆ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಹಾಗೂ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸೋಫಿಯಾ ಭಾಷಣ ಮಾಡಿದ್ದು, ಹಲವರು ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಸೋಫಿಯಾ 50ಕ್ಕೂ ಹೆಚ್ಚು ಮುಖಭಾವ(ಎಕ್ಸ್ಪ್ರೆಷನ್ಸ್)ವನ್ನು ಪ್ರದರ್ಶಿಸುತ್ತದೆ. ಅಲ್ಲದೆ ವ್ಯಕ್ತಿಗಳನ್ನು ಸಹ ಸುಲಭವಾಗಿ ಗುರುತಿಸುತ್ತದೆ. ಸರಳ ಭಾಷೆ ಬಳಸಿ ಭಾಷಣವನ್ನು ಸಹ ಮಾಡಬಲ್ಲದು. ಸೋಫಿಯಾ ಕ್ರಿಯಾತ್ಮಕ ಕಾಲುಗಳನ್ನು ಸಹ ಹೊಂದಿದೆ. ಇವುಗಳನ್ನು 2018ರಲ್ಲಿ ಅಳವಡಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos