ವಿಷ ಪ್ರಸಾದ ವಿತರಣೆ ಹಾಗೂ ಬಾಯ್ಲರ್ ಸ್ಪೋಟ ಪ್ರಕರಣ – ಸದನದಲ್ಲಿ ಪ್ರತಿಧ್ವನಿ

  • In State
  • December 17, 2018
  • 187 Views
ವಿಷ ಪ್ರಸಾದ ವಿತರಣೆ ಹಾಗೂ ಬಾಯ್ಲರ್ ಸ್ಪೋಟ ಪ್ರಕರಣ – ಸದನದಲ್ಲಿ ಪ್ರತಿಧ್ವನಿ

ಸ್ಪೀಕರ್ ರಮೇಶ್ ಕುಮಾರ್… ಸ್ಪೀಕರ್ ರಮೇಶ್ ಕುಮಾರ್ ರವರಿಂದ ಚಾಮರಾಜನಗರದ ಸುಳುವಾಡಿಯ ವಿಷ ಪ್ರಸಾದ ವಿತರಣೆ ಘಟನೆ ಹಾಗೂ ಬಾಗಲಕೋಟೆಯ ಬಾಯ್ಲರ್ ಸ್ಪೋಟ ಪ್ರಕರಣ ಪ್ರಸ್ತಾಪ. ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಸ್ಪೀಕರ್..
ವಿಧಾನಸಭಾ ಕಲಾಪ ಆರಂಭ
ವಿಧಾನಸಭೆ ಕಲಾಪ.ಶಾಸಕರ .ಬಹುತೇಕ ಆಸನಗಳು ಖಾಲಿ ಖಾಲಿ..
ಮಾಜಿ ಶಾಸಕ ಕರಿಯಣ್ಣ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ…

ಯಡಿಯೂರಪ್ಪ: ದೇವಸ್ಥಾನಕ್ಕೆ ಹೋದಾಗ ಪ್ರಸಾದ ಸ್ವೀಕಾರ ಮಾಡುವುದು ವಾಡಿಕೆ.ಪ್ರಸಾದ ಮಾಡಿದವನ ಮಗಳೇ ಮೃತಪಟ್ಟಿದ್ದಾಳೆ.ಅಂದ್ರೆ ಯಾವುದೋ ವ್ಯವಸ್ಥಿತ ಸಂಚು ಇದೆ.ಇನ್ನು ಮುಂದೆ ಇಂತಹಾ ಕೆಲಸ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ರೀತಿಯಲ್ಲಿ ಸರ್ಕಾರ ಆರೋಪಿಗಳಿಗೆ ಶಿಕ್ಷೆ ನೀಡಬೇಕು.ಈ ನಿಟ್ಟಿನಲ್ಲಿ ಸರ್ಕಾರ ಸರಿಯಾದ ದಿಕ್ಕಿನಲ್ಲಿ ಕ್ರಮ ಕೈಗೊಂಡಿದೆ.

ಡಾ.ಜಿ.ಪರಮೇಶ್ವರ : ಚಾಮರಾಜನಗರದ ಹನೂರು ತಾಲೂಕಿನ ಸುಳುವಾಡಿಯಲ್ಲಿ ಕಿಚ್ಚುಗತ್ತಿ ಮಾರಮ್ಮ ದೇವಾಲಯವಿದೆ.ಡಿಸೆಂಬರ್ 15ರಂದು ಗೋಪುರ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮವಿತ್ತು.ಸಹಜವಾಗಿಯೇ 150 ಜನರಿಗೆ ಪ್ರಸಾದ ವಿತರಣೆ ಆಗಿತ್ತು.ಪ್ರಸಾದ ಸೇವಿಸಿದ ಅರ್ದಗಂಟೆಯಲ್ಲಿ ಅಸ್ವಸ್ಥರಾದರು.ಸ್ಥಳದಲ್ಲಿದ್ದ ಪೊಲೀಸರು ಮತ್ತು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ರು..11 ಜನ ಅರ್ದಗಂಟೆಯಲ್ಲಿ ಮೃತಪಟ್ಟರು.125 ಜನ ಅಸ್ವಸ್ಥಗೊಂಡರು.ಅಸ್ವಸ್ಥರಾದವರನ್ನು ತಕ್ಷಣ ಸುತ್ತಮುತ್ತಲಿನ ಎಲ್ಲ ಆಸ್ಪತ್ರೆಗಳಿಗೆ ದಾಖಲಿಸಲಾಯ್ತು..ಆಸ್ಪತ್ರೆಯಲ್ಲಿ ಇನ್ನೂ ಇಬ್ಬರು ಮೃತಪಟ್ಟರು.ನಿನ್ನೆ ಸಂಜೆ ಒಬ್ಬರು ಮೃತಪಟ್ಟರು.ಇದರಿಂದ ಮೃತಪಟ್ಟವರ ಸಂಖ್ಯೆ 14,ಕ್ಜೆ ಏರಿದೆ…ಪ್ರಸಾದದಲ್ಲಿ ಮಾನೋಕ್ಲೋಟೋಮಾಸ್ ಎಂಬ ರಾಸಾಯನಿಕ ಬೆರೆತಿದೆ ಎಂದು ಪೋರೆನ್ಸಿಕ್ ವರದಿಯಲ್ಲಿ ಬಂದಿದೆ.ಏಳು ಜನರನ್ನು ವಶಕ್ಕೆ ಪಡೆಯಲಾಗಿದೆ.ಕೆಲವರೆಲ್ಲಾ ಊರು ಬಿಟ್ಟು ಹೋಗಿದ್ದಾರೆ.ತನಿಖೆ ನಡೆಯುತ್ತಿದೆ.ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚಲಾಗುತ್ತದೆ.ಮೃತಪಟ್ಟವರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ.ಪರಿಹಾರ ಘೋಷಿಸಲಾಗಿದೆ.

ಹನೂರು ಶಾಸಕ ನಾಗೇಂದ್ರ : ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನ ಖಾಸಗಿ ಟ್ರಸ್ಟ್ ಒಡೆತನಕ್ಕೆ ಸೇರಿದ್ದು.15ಕೆಜಿ ಅಕ್ಕಿಯಿಂದ ರೈಸ್ ಬಾತ್ ಪ್ರಸಾದ ಮಾಡಿದ್ರು…ಅಸ್ವಸ್ಥಗೊಂಡವರನ್ನು ತಕ್ಷಣ ವಿವಿಧ ಆಸ್ಪತ್ರೆಗಳಿಗೆ ಸೇರಿಸಿ,ಅವರ ಚಿಕಿತ್ಸಾ,ವೆಚ್ಚವನ್ನು ಸರ್ಕಾರ ಸಂಪೂರ್ಣ ಭರಿಸುವುದಾಗಿ ಸಿಎಂ ಘೋಷಿಸಿದ್ರು.ಇಲ್ಲದೇ ಇದ್ರೆ ಕೆ.ಆರ್.ಆಸ್ಪತ್ರೆ ಒಂದನ್ನೇ ನಂಬಿಕೊಂಡಿದ್ರೆ ವೆಂಟಿಲೇಟರ್ ಸಿಗದೆ ಸಾವಿನ ಸಂಖ್ಯೆ ಹೆಚ್ಚುತ್ತಿತ್ತು. ಖಾಸಗಿ ಆಸ್ಪತ್ರೆಗಳವರು ಕೂಡ ಹಣಕಾಸಿನ ಬಗ್ಗೆ ಯೋಚಿಸದೆ ಚಿಕಿತ್ಸೆ ನೀಡಿದ್ರು.ಇಪ್ಪತ್ತು ಜನ ಇನ್ನು ವೆಂಟಿಲೇಟರ್ ನಲ್ಲಿ ಇದ್ದಾರೆ ನಾಲ್ಕೈದು ಜನರ ಪರಿಸ್ಥಿತಿ ಗಂಭೀರವಾಗಿದೆ.
ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಅರ್ಚಕರ ನಡುವೆ ಒಡಕಿತ್ತು. ಹಾಗಾಗಿಯೇ ಸರ್ಕಾರ ಈ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ತೆಗೆದುಕೊಳ್ಳಬೇಕು.ಇಡೀ ಕ್ಷೇತ್ರದಲ್ಲಿ ಆತಂಕ ಉಂಟಾಗಿದೆ.ಇದರಲ್ಲಿ ಮೃತಪಟ್ಟ ವರೆಲ್ಲಾ ದಲಿತರು.ಈದೇವಸ್ಥಾನದ ಭಕ್ತರಲ್ಲ.ಓಂ ಶಕ್ತಿ ದೇವಸ್ಥಾನಕ್ಕೆ ಹೊರಟಿದ್ರು.ಹೊರಡುವ ಮುಂಚೆ ಇಲ್ಲಿ ಪೂಜೆ ಸಲ್ಲಿಸಿ ಹೋಗಲು ಬಂದಿದ್ದರು..ಮೃತಪಟ್ಟವರ ಕುಟುಂಬಗಳು ಅನಾಥವಾಗಿವೆ.ಹಾಗಾಗಿ ಸರ್ಕಾರ ಇವರಿಗೆ ಪರಿಹಾರದ ಮೊತ್ತ ಹೆಚ್ಚಿಸಬೇಕು.

ಗೋವಿಂದ ಕಾರಜೋಳ : ಮುಧೋಳದ ಸಕ್ಕರೆ ಕಾರ್ಖಾನೆ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಸೇಫ್ಟಿವಾಲ್ ಸರಿಯಾಗಿ ಕೆಲಸ ಮಾಡದೇ ಇದ್ದಿದ್ದು ಅನಾಹುತಕ್ಕೆ ಕಾರಣವಾಗಿದೆ.ಮೃತಪಟ್ಟ ನಾಲ್ಕೂ ಮಂದಿ ಯುವಕರು.ಚಿಕ್ಕ ವಯಸ್ಸು,ಸಣ್ಣ ಮಕ್ಕಳಿವೆ.ಇಡೀ ಕಾರ್ಖಾನೆಯ ಎರಡು ಅಂತಸ್ಥಿನ ಕಟ್ಟಡ ಸಂಪೂರ್ಣ ಕಿತ್ತು ಹೋಗಿದೆ.ಅಲ್ಲಿ ಜನವಸತಿ ಇರಲಿಲ್ಲವಾದುದರಿಂದ ಸಾವಿನ ಸಂಖ್ಯೆ ಹೆಚ್ಚಾಗಲಿಲ್ಲ. ಮೃತಪಟ್ಟವರ ಕುಟುಂಬಗಳಿಗೆ ಮುರುಗೇಶ್ ನಿರಾಣಿಯವರು ತಲಾ ಐದು ಲಕ್ಷ ರೂ.ಪರಿಹಾರ ಮತ್ತು ಕುಟುಂಬದಲ್ಲಿ ಒಬ್ಬರಿಗೆ ಕೆಲಸ ಕೊಡುವ ಭರವಸೆ ನೀಡಿದ್ದಾರೆ.ಕಿಚ್ಚುಗತ್ತಿ ಮಾರಮ್ಮನ ದೇವಸ್ಥಾನದ ಘಟನೆಯಲ್ಲಿ ಮೃತಪಟ್ಟವರಿಗೆ ಕೊಟ್ಟಂತೆ ಸರ್ಕಾರವೂ ಈ ಘಟನೆಯಲ್ಲಿ ಮೃತಪಟ್ಟ ರಿಗೂ ಐದು ಲಕ್ಷ ರೂ.ಪರಿಹಾರ ನೀಡಬೇಕು.ಅವರು ಮಂತ್ರಿಗಳು ಬರಬೇಕು.ಅಲ್ಲಿಯವರಗೆ ಶವ ಒಯ್ಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು ನಿನ್ನೆ ರಾತ್ರಿ ಇಡೀ ಮನವೊಲಿಸಿದೆ.

ಸ್ಪೀಕರ್ : ಈ ಸಾವುಗಳಿಗೆ ಕಾರಣರಾದವರನ್ನು ಪತ್ತೆ ಹಚ್ಚಿ ಶಿಕ್ಷೆ ನೀಡದೇ ಇದ್ದರೆ ಅಧಿಕಾರಸ್ಥಾನಗಳಲ್ಲಿ ಇರುವವರ ಮನೆಗಳಲ್ಲಿ ಪ್ರತೀಕಾರ ಪ್ರಜ್ವಲಿಸಬಹುದು.ಹಾಗಾಗಿ ಮೊದಲು ತಪ್ಪಿತಸ್ಥರನ್ನು ಪತ್ತೆಹಚ್ಚಿ ಉಗ್ರ ಶಿಕ್ಷೆ ವಿಧಿಸಬೇಕು. ಆಗ ಮಾತ್ರ ಇಂತಹಾ ಘಟನೆಗಳು ಮರುಕಳಿಸುವುದು ನಿಲ್ಲುತ್ತದೆ.
ಸದನದಲ್ಲಿ ಮೊದಲ ಪ್ರಶ್ನೆ ಕೇಳಿದ್ದ ಬಿಜೆಪಿಯ ಶಂಕರ್ ವಿ.ಪಾಟೀಲ್ ಸದನಕ್ಕೆ ಗೈರು.ಬಿಜೆಪಿಯ ವಿಪ್ ಸುನೀಲ್ ಕುಮಾರ್ ರನ್ನು ತರಾಟೆಗೆ ತೆಗೆದುಕೊಂಡ ಸ್ಪೀಕರ್.. ಮೊದಲ ಬಾರಿ ಶಾಸಕರಾದವರು.ಪ್ರಶ್ನೆ ಕೇಳಿ ಗೈರು ಹಾಜರಾದರೆ ಹೇಗೆ? ಕನಿಷ್ಟ ನಮ್ಮ ಕಚೇರಿಗೆ ಮನವಿ ಕಳುಹಿಸಿ ಅನುಮತಿಯನ್ನಾದರೂ ಪಡೆಯಬೇಕು. ಆ ಬಗ್ಗೆ ಪಕ್ಷಗಳ ಸಚೇತಕರು ಗಮನ ಹರಿಸಿ.

ಫ್ರೆಶ್ ನ್ಯೂಸ್

Latest Posts

Featured Videos