ವಿಷ ಸೇವಿಸಿ ವಿದ್ಯಾರ್ಥಿ ಸಾವು

ವಿಷ ಸೇವಿಸಿ ವಿದ್ಯಾರ್ಥಿ ಸಾವು

ಹಾವೇರಿ, ಅ. 3 : ಪ್ರೇಮ ವೈಫಲ್ಯ ಹಿನ್ನಲೆ ವಿದ್ಯಾರ್ಥಿಯೋರ್ವ ಕಾಲೇಜು ಮೈದಾನದಲ್ಲೇ ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಜಿ.ಎಚ್.ಕಾಲೇಜಿನಲ್ಲಿ ನಡೆದಿದೆ. ಹಾವೇರಿ ತಾಲೂಕಿನ ದೇವಗೇರಿ ಗ್ರಾಮದ ಜಗದೀಶ್ ಯಲ್ಲಾಪುರ (19) ಜಿ.ಎಚ್. ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಲೇಜಿನ ಯುವತಿಯನ್ನು ಪ್ರೇಮಿಸುತ್ತಿದ್ದ. ಆದರೆ, ಆಕೆ ಆತನ ಪ್ರೇಮ ನಿವೇದನೆ ತಿರಸ್ಕರಿಸಿದ ಹಿನ್ನೆಲೆ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos