ವರ್ತೂರ್ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ

ವರ್ತೂರ್ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ

ಮಹದೇವಪುರ, ಡಿ. 12: ಮಕ್ಕಳ ವಿಜ್ಞಾನ ಹಬ್ಬ ವೈಜ್ಞಾನಿಕ ಕಲಿಕೆಗೆ ಸಹಕಾರಿಯಾಗಲ್ಲಿದೆ ಎಂದು ಸ್ಥಳೀಯ ಪಾಲಿಗೆ ಸದಸ್ಯೆ ಪುಷ್ಪ ಮಂಜುನಾಥ್ ತಿಳಿಸಿದರು.

ಕ್ಷೇತ್ರದ ವರ್ತೂರು ವಾರ್ಡಿನ ಗೂಂಜುರು ಸರ್ಕಾರಿ ಮಾದರಿ ಪ್ರೌಡಶಾಲೆಯಲ್ಲಿ ಸರ್ವಶಿಕ್ಷಣ ಅಭಿಯಾನದಡಿ ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಸಹಯೋಗದಲ್ಲಿ ಸ್ಥಳೀಯರ ಸಹಭಾಗಿತ್ವದಲ್ಲಿ ನಡೆದ ವರ್ತೂರ್ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆ ಮಕ್ಕಳಿಗೆ ವಿಜ್ಞಾನ ವಿಚಾರವಾಗಿ ಇಂತಹ ಹಬ್ಬ ಆಚರಣೆ ಮಾಡುತ್ತಿರುವುದು ಮಕ್ಕಳಲ್ಲಿ ಹೆಚ್ಚಿನ ಬದಲಾವಣೆ ಹಾಗೂ ಅರಿವು ಮೂಡಲು ಸಾಧ್ಯವಿದೆ. ಇದರಿಂದ ಮಕ್ಕಳ ವಿಜ್ಞಾನ ಹಬ್ಬ ವೈಜ್ಞಾನಿಕ ಕಲಿಕೆಗೆ ಸಹಕಾರಿಯಾಗಲ್ಲಿದೆ ಎಂದರು.

ಶಾಲಾ ಮಕ್ಕಳವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಡೊಳ್ಳು ಕುಣಿತ, ನೃತ್ಯ, ಯಕ್ಷಗಾನ, ಸಂಗೀತ ಹಾಗೂ ದೇಶಭಕ್ತರು, ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು, ರೈತ, ಯೋಧ ಮುಂತಾದವರ ವೇಷಭೂಷಣ ತೊಟ್ಟು ವಿದ್ಯಾರ್ಥಿಗಳು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ವಿಜ್ಞಾನ ಹಬ್ಬದಲ್ಲಿ ಶಾಲೆ ಮುಖ್ಯೋಪಾಧ್ಯಾಯನಿ ಹೇಮಾಲತಾ, ಕೃಷ್ಣ ರೆಡ್ಡಿ, ಸಿ.ಆರ್.ಪಿ, ಗಿರೀಶ್, ಮುರಳಿಕೃಷ್ಣ, ವರ್ತೂರು ಸರ್ಕಾರಿ ಕಾಲೇಜು ಪ್ರಾಂಶುಪಾಲ ಸಿದ್ದಪ್ಪ, ಸ್ಥಳೀಯ ಮುಖಂಡರಾದ ರಾಜಾರೆಡ್ಡಿ, ಮನೋಹರ ರೆಡ್ಡಿ, ರಾಮಪ್ರಕಾಶ್ ರೆಡ್ಡಿ, ಬಾಬು, ಜಗದೀಶ್, ಗೋವಿಂದಪ್ಪ ನೂರಾರು ಶಾಲೆ ಮಕ್ಕಳು ಭಾಗಿಯಾಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos