‘ವಿರಾಟ್’ ದಾಖಲೆ ಮುರಿದ ಅಜಾಮ್!

‘ವಿರಾಟ್’ ದಾಖಲೆ ಮುರಿದ ಅಜಾಮ್!

ಕರಾಚಿ, ಅ. 1 : ಅತಿ ವೇಗದ ಶತಕ ಸಿಡಿದ ಪಾಕಿಸ್ತಾನದ ಬಾಬರ್ ಅಜಾಮ್ ವಿಶ್ವದ 3ನೇ ಬ್ಯಾಟ್ಸ್ ಮನ್ ಸಾಧನೆಗೆ ಭಾಜನರಾಗಿದ್ದಾರೆ. ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆ ಮೂರಿದಿದ್ದಾರೆ. ಬಾಬರ್ ತಮ್ಮ ವೃತ್ತಿ ಜೀವನದಲ್ಲಿ 11ನೇ ಶತಕ ಸಿಡಸಿ ಇತಿಹಾಸ ಸೃಷ್ಟಿಸಿದ್ದಾರೆ. 105 ಎಸೆತಗಳಲ್ಲಿ 115 ರನ್ ಗಳಿಸಿ ವೃತ್ತಿ ಜೀವನದ 11ನೇ ಶತಕ ಪೂರೈಸಿದರು. ಶ್ರೀಲಂಕಾ 46.5 ಓವರ್ಗಳಲ್ಲಿ 238 ರನ್ಗಳಿಗೆ ಆಲ್ ಔಟ್ ಆಯಿತು. ಬಾಬರ್ ಅಜಾಮ್ 11 ಶತಕ ಸಿಡಿಸಲು ಏಕದಿನ ಪಂದ್ಯದ 71 ಇನಿಂಗ್ಸ್ಗಳನ್ನು ತೆಗೆದುಕೊಂಡರೆ, ಆಫ್ರಿಕಾ ತಂಡದ ಮಾಜಿ ಆರಂಭಿಕ ಹಾಶಿಂ ಆಮ್ಲಾ 64 ಇನಿಂಗ್ಸ್ಗಳಲ್ಲಿ ತಿ ವೇಗವಾಗಿ 11 ಶತಕ ಸಿಡಿಸಿದ್ದಾರೆ. ಡಿ ಕಾಕ್ 65 ಇನಿಂಗ್ಸ್ಗಳಲ್ಲಿ 11 ಶತಕ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇದೀಗ ಬಾಬರ್ ಅಜಾಮ್ ಅವರು, 82 ಇನಿಂಗ್ಸ್ಗಳಲ್ಲಿ 11 ಶತಕ ಸಿಡಿಸಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos