ಪರೀಕ್ಷೆಗೂ ಮುನ್ನವೇ ಸಾವನ್ನಪ್ಪಿದ ಪ್ರತಿಭಾವಂತ ವಿದ್ಯಾರ್ಥಿ!

ಪರೀಕ್ಷೆಗೂ ಮುನ್ನವೇ ಸಾವನ್ನಪ್ಪಿದ ಪ್ರತಿಭಾವಂತ ವಿದ್ಯಾರ್ಥಿ!

ನೋಯ್ಡಾ, ಮೇ.8, ನ್ಯೂಸ್ ಎಕ್ಸ್ ಪ್ರೆಸ್:  ವಿಜ್ಞಾನಿ ಸ್ಟೀಫನ್ ಹಾಕಿಂಗ್ ರ ದಾರಿಯಲ್ಲಿ ನಡೆಯಲು ಬಯಸಿದ್ದ ವಿದ್ಯಾರ್ಥಿ ವಿನಾಯಕ್ ಶ್ರೀಧರ್ ಸಿಬಿಎಸ್ಇ ಪರೀಕ್ಷೆ ಬರೆದಿದ್ದ. 10ನೇ ತರಗತಿಯ ಮೂರು ವಿಷಯಗಳ ಪರೀಕ್ಷೆ ಮಾತ್ರ ಬರೆದಿದ್ದ. ಈ ಮೂರು ವಿಷಯದಲ್ಲಿ ಉತ್ತಮ ಫಲಿತಾಂಶ ಬಂದಿದೆ. ಆದ್ರೆ ಇದನ್ನು ನೋಡುವ ಭಾಗ್ಯ ವಿನಾಯಕ್ ಗೆ ಇಲ್ಲ. ಮಾರ್ಚ್ ನಲ್ಲಿ ಮೂರು ಪರೀಕ್ಷೆ ಬರೆದಿದ್ದ ವಿನಾಯಕ್, ಇನ್ನೆರಡು ಪರೀಕ್ಷೆ ಬಾಕಿಯಿರುವಾಗ್ಲೇ ಸಾವನ್ನಪ್ಪಿದ್ದ. ಇಂಗ್ಲೀಷ್ ಭಾಷೆಯಲ್ಲಿ ವಿನಾಯಕ್ ಗೆ 100 ಅಂಕ ಸಿಕ್ಕಿದೆ. ಸಂಸ್ಕೃತದಲ್ಲಿ 97 ಅಂಕ ಗಳಿಸಿದ್ದಾನೆ. ವಿಜ್ಞಾನದಲ್ಲಿ 96 ಅಂಕಗಳನ್ನು ಪಡೆದಿದ್ದ. 10ನೇ ಸಿಬಿಎಸ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವುದು, ಗಗನಯಾತ್ರಿಯಾಗುವುದು ಹಾಗೂ ರಾಮೇಶ್ವರಂಗೆ ಹೋಗುವುದು ವಿನಾಯಕ್ ಆಸೆಯಾಗಿತ್ತು. ಎರಡು ವರ್ಷದಲ್ಲಿರುವಾಗ್ಲೇ ವಿನಾಯಕ್ ಸ್ನಾಯು ಕ್ಷಯಕ್ಕೆ ಒಳಗಾಗಿದ್ದ. ಇದೊಂದು ಅನುವಂಶೀಯ ರೋಗ.

ವಿನಾಯಕ್ ನೋಯ್ಡಾದ ಅಮಿಟಿ ಶಾಲೆಯಲ್ಲಿ ಓದುತ್ತಿದ್ದ. ಆದ್ರೆ ಸ್ಟೀಫನ್ ರಂತೆ ಗಾಲಿ ಖುರ್ಚಿಯಲ್ಲಿ ಆತನ ಜೀವನ ಸಾಗಿತ್ತು. ಪರೀಕ್ಷೆ ಆರಂಭಕ್ಕೂ ಮುನ್ನವೇ ವಿನಾಯಕ್ ಸಹಾಯಕ್ಕೆ ಬರಹಗಾರನೊಬ್ಬ ಸಿಕ್ಕಿದ್ದ. ಸಂಸ್ಕೃತ ಪರೀಕ್ಷೆಯನ್ನು ತಾನೇ ಬರೆದಿದ್ದ ವಿನಾಯಕ್, ವಿಜ್ಞಾನ ಹಾಗೂ ಇಂಗ್ಲೀಷ್ ಗೆ ಬರಹಗಾರರ ಸಹಾಯ ಪಡೆದಿದ್ದ. ಪರೀಕ್ಷೆ ನಂತ್ರ ರಾಮೇಶ್ವರದಲ್ಲಿ ರಜೆ ಕಳೆಯುವ ಪ್ಲಾನ್ ಮಾಡಿದ್ದ ವಿನಾಯಕ್, ವೀಲ್ ಚೇರ್ ನಲ್ಲಿಯೇ ಗಗನಯಾತ್ರೆ ಮಾಡ್ತೇನೆ ಎನ್ನುತ್ತಿದ್ದನಂತೆ. ಆತನ ಫಲಿತಾಂಶ ನೋಡಿ ಪಾಲಕರು ಕಣ್ಣೀರಿಡುತ್ತಿದ್ದಾರೆ. ಮಗನ ಆಸೆ ಈಡೇರಿಸಲು ರಾಮೇಶ್ವರಕ್ಕೆ ತೆರಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos