ಬೆಂಗಳೂರು ಏರ್ ಶೋ: ಎರಡು ವಿಮಾನಗಳ ನಡುವೆ ಡಿಕ್ಕಿ

ಬೆಂಗಳೂರು ಏರ್ ಶೋ: ಎರಡು ವಿಮಾನಗಳ ನಡುವೆ ಡಿಕ್ಕಿ

ಬೆಂಗಳೂರು: ಬೆಂಗಳೂರು ಏರ್ ಶೋ 2019ರ
ತರಬೇತಿ ವೇಳೆ 2 ವಿಮಾನಗಳ ನಡುವೆ
ಡಿಕ್ಕಿ ಸಂಭವಿಸಿದೆ.

ಇಬ್ಬರು
ಪೈಲೆಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಫೆ.20ರಿಂದ 24ರ ತನಕ
ಏರೋ ಇಂಡಿಯಾ ವೈಮಾನಿಕ ಪ್ರದರ್ಶನ
ನಡೆಯಲಿದೆ.

ಮಂಗಳವಾರ
ಬೆಳಗ್ಗೆ 11:30ರ ಸುಮಾರಿಗೆ ಯಲಹಂಕ
ಬಳಿಯ ಗಂಟಿಗಾನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಎರಡು ಸೂರ್ಯ ಕಿರಣ್ ವಿಮಾನಗಳು
ತರಬೇತಿ ನಡೆಸುವ ವೇಳೆ ಮುಖಾಮುಖಿ
ಡಿಕ್ಕಿಯಾಗಿವೆ.

ಏರೋ ಇಂಡಿಯಾದಲ್ಲಿ 52 ವಿಮಾನಗಳ ಪ್ರದರ್ಶನ

ಯಲಹಂಕ ವಾಯುನೆಲೆಯಲ್ಲಿ ಫೆ.20ರ ಬುಧವಾರದಿಂದ
ಏರ್ ಶೋ ಆರಂಭವಾಗಲಿದೆ. ಆದ್ದರಿಂದ,
ತರಬೇತಿ ನಡೆಸಲಾಗುತ್ತಿತ್ತು. ಇಂದು ಬೆಳಗ್ಗೆ ತರಬೇತಿ
ನಡೆಸುವಾಗ ಆಕಸ್ಮಿಕವಾಗಿ ವಿಮಾನಗಳು ಡಿಕ್ಕಿಯಾಗಿವೆ.

ವಿಮಾನದ
ಪೈಲೆಟ್‌ಗಳು ತುರ್ತು ನಿರ್ಗಮನ
ದ್ವಾರದಿಂದ ಕೆಳಗೆ ಹಾರಿದ್ದು ಪ್ರಾಣಾಪಾಯದಿಂದ
ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಒಬ್ಬ
ಪೈಲೆಟ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ
ದಾಖಲು ಮಾಡಲಾಗಿದೆ.

ಮುಖಾಮುಖಿ
ಡಿಕ್ಕಿಯಾದ ವಿಮಾನಗಳು ಮನೆಯ ಮೇಲೆ ಬಿದ್ದಿದ್ದು
ಬೆಂಕಿ ಹೊತ್ತಿಕೊಂಡಿದೆ. ಮನೆಯಲ್ಲಿ ಯಾರಿದ್ದರು? ಎಂಬುದು ಇನ್ನೂ ತಿಳಿದುಬಂದಿಲ್ಲ.
ಶೆಡ್ ತರದ ಮನೆಯ ಮೇಲೆ
ವಿಮಾನಗಳು ಬಿದ್ದಿದ್ದು, ಹೆಚ್ಚಿನ ಅನಾಹುತ ನಡೆದಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos