ವಿಮಾನ ನಿಲ್ದಾಣದಲ್ಲಿ ‘ಶ್ವಾನ’ಗಳ ಕಾಟ!

ಕಲಬುರಗಿ, ಜೂ. 20: ವಿಮಾನ ಹಾರಾಟದ ಕನಸು ಕಾಣುತ್ತಿದ್ದ  ಕಲಬುರಗಿ ಜನರ ಆಸೆಗೆ ಕೇಂದ್ರ ವಿಮಾನ ನಿರ್ದೇಶನಾಲಯ ತಣ್ಣೀರೆರಚಿದೆ. ಲೋಹದ ಹಕ್ಕಿಗಳ ಹಾರಾಟಕ್ಕೆ ಬೀದಿನಾಯಿಗಳು ಅಡ್ಡಿಯಾಗುತ್ತಿವೆ ಎಂದು ಆರ್‍ ಟಿಐ ಕಾರ್ಯಕರ್ತ ಸಿದ್ದರಾಮಯ್ಯ ಹಿರೇಮಠ  ಆಗ್ರಹಿಸಿದ್ದಾರೆ.

ಆರ್‍ ಟಿಐ ಕಾರ್ಯಕರ್ತ ಸಿದ್ದರಾಮಯ್ಯ ಹಿರೇಮಠ ಆಗ್ರಹಿಸಿ,  ಕಲಬುರಗಿ ವಿಮಾನ ನಿಲ್ದಾಣವನ್ನು ಕೇಂದ್ರ ವಿಮಾನಯಾನ ಸಚಿವಾಲಯ ಉಡಾನ್ ಯೋಜನೆ ವ್ಯಾಪ್ತಿಗೆ ಸೇರಿಸಿದೆ. ಹೀಗಾಗಿ ಇಲ್ಲಿ ವಿಮಾನ ಹಾರಾಟಕ್ಕೆ ಅನುಮತಿ ಕೊಡಬೇಕು ಎಂದು ಕೇಂದ್ರ ವಿಮಾನ ನಿರ್ದೇಶನಾಲಯಕ್ಕೆ ರಾಜ್ಯಸರ್ಕಾರ ಅರ್ಜಿ ಸಲ್ಲಿಸಿತ್ತು.

 

 

ಕಳೆದ ಫೆ.25 ರಿಂದ 28ರವರೆಗೆ 3 ದಿನಗಳ ಕಾಲ ಕೇಂದ್ರ ಡಿಜಿಸಿಎ ವಿಮಾನ ಹಾರಾಟದ ಬಗ್ಗೆ ಪರಿಶೀಲನೆ ನಡೆಸಿತ್ತು. ಆದರೆ ಪರಿಶೀಲನೆ ನಡೆಸಿದ ಡಿಜಿಸಿಎ ವಿಮಾನ ನಿಲ್ದಾಣದ ರನ್‍ವೇ ಮೇಲೆ ವಿಮಾನ ನಿಲ್ದಾಣದ ರನ್‍ವೇ ಪ್ರದೇಶದಲ್ಲಿ ಬೀದಿನಾಯಿಗಳ ಒಡಾಟವಿದೆ.  ರನ್‍ವೇ ಪ್ರದೇಶದಲ್ಲಿ ಗುಂಡಿಗಳಿವೆ ಮತ್ತು ಸುತ್ತಮುತ್ತ ಹುಲ್ಲು ಬೆಳೆದಿದೆ. ರನ್‍ವೇ ಮಾರ್ಕಿಂಗ್ ಮತ್ತು ಗ್ರೌಂಡ್ ಲೈಟಿಂಗಿಲ್ಲ ಪ್ರದೇಶದಲ್ಲಿ ಬೆಂಕಿ ಅವಘಡ ಆದರೆ ತಪ್ಪಿಸುವ ವ್ಯವಸ್ಥೆಯಿಲ್ಲ. ವಿಮಾನ ನಿಲ್ದಾಣದಲ್ಲಿ ಯಾವುದೇ ರೀತಿಯ ಭದ್ರತೆ ಸಿಬ್ಬಂದಿ ಮತ್ತು ಯಂತ್ರ ನೇಮಿಸಿಲ್ಲ. ವಾಹನಗಳ ನಿಲುಗಡೆ ಸ್ಥಳದಲ್ಲಿ ಹಲವೆಡೆ ದೊಡ್ಡ ದೊಡ್ಡ ತಗ್ಗು ಬಿದ್ದಿವೆ.

ಫ್ರೆಶ್ ನ್ಯೂಸ್

Latest Posts

Featured Videos