ವಿಮಾನವನ್ನೇ ಮನೆಯಾಗಿಸಿಕೊಂಡ ನಿವೃತ್ತ ಎಂಜಿನಿಯರ್.!

ವಿಮಾನವನ್ನೇ ಮನೆಯಾಗಿಸಿಕೊಂಡ ನಿವೃತ್ತ ಎಂಜಿನಿಯರ್.!

ಅಮೆರಿಕಾ, ಏ. 23, ನ್ಯೂಸ್ ಎಕ್ಸ್ ಪ್ರೆಸ್: ದೊಡ್ಡ ವಿಮಾನವನ್ನೇ ಮನೆಯಾಗಿಸಿಕೊಂಡರೆ ಹೇಗೆ..!? ಆ ಕಲ್ಪನೆಯೇ ಒಂದು ಅದ್ಭುತ. ಹೌದು. ಇದಕ್ಕೆ ದೊಡ್ಡ ಮಟ್ಟದ ಆಲೋಚನೆ ಬೇಕಾಗುತ್ತದೆ. ಇಂತಹ ಹೈ ಲೆವೆಲ್ ಆಫ್ ಥಿಂಕಿಂಗ್ ಸಾಕಾರಗೊಳಿಸಿದ್ದಾರೆ ಅಮೆರಿಕಾದ ಒರೆಗಾನ್ ಪ್ರಾಂತ್ಯದ ನಿವೃತ್ತ ಎಲೆಕ್ಟ್ರಿಕಲ್ ಎಂಜಿನಿಯರ್ ಬ್ರೂಸ್ ಕ್ಯಾಂಬೆಲ್.

ಬ್ರೂಸ್ ಕ್ಯಾಂಬೆಲ್ ಅವರದ್ದು ಮೊದಲೇ ಎಂಜಿನಿಯರ್ ಬುದ್ಧಿ. ಅದರೊಂದಿಗೆ ವಿಭಿನ್ನ ಯೋಚನಾಲಹರಿ. ಹಾಗಾಗಿಯೇ ಅವರು ಹಳೆಯ ವಿಮಾನವೊಂದನ್ನು ಖರೀದಿಸಿ, ತಮ್ಮ ಮನೆಯನ್ನಾಗಿಸಿಕೊಂಡಿದ್ದಾರೆ.

ಆ ವಿಮಾನ ಇನ್ನೇನು ಗುಜರಿ ಸೇರಬೇಕಿತ್ತು. ಆಗ ಅದರ ಮೇಲೆ ಕಣ್ಣು ಹಾಕಿದ ಕ್ಯಾಂಬೆಲ್, ಅದನ್ನು ಖರೀದಿಸಿ ಮನೆಯನ್ನಾಗಿಸುವ ಕಾರ್ಯಕ್ಕೆ ಕೈಹಾಕಿಯೇಬಿಟ್ಟರು. ಅದಕ್ಕೆಂದೇ ವಿಶಾಲ ಜಾಗ ಖರೀದಿಸಿ, ತಮ್ಮ ಟೇಸ್ಟ್ ಗೆ ತಕ್ಕಂತೆ ವಿಮಾನ ಮನೆ ನಿರ್ಮಿಸಿಕೊಂಡರು. ಇನ್ನು ಇಂತಹ ದುಬಾರಿ ಮನೆಗೆ ನೆರೆಹೊರೆ ಇರುವ ಮಾತಾದರೂ ಎಲ್ಲಿಯದ್ದು. ಹಾಗಾಗಿ ಇವರದು ಏಕಾಂಗಿ ಮನೆ!

ಕ್ಯಾಂಬೆಲ್, 1990ರಲ್ಲಿಯೇ ಗ್ರೀಸ್ ದೇಶದ ಹಳೆಯ ವಿಮಾನವೊಂದನ್ನ ಖರೀದಿಸಿದ್ದರು. ನಂತರ ಹಲವು ವರ್ಷಗಳ ಕಾಲ ಅವರು ವಿಮಾನದ ವಿವಿಧ ಆಯಾಮಗಳನ್ನು ಪರೀಕ್ಷಿಸುತ್ತಾ, ಪರಿಗಣಿಸುತ್ತಾ ತಮ್ಮ ಇಷ್ಟದಂತೆ ವಿಮಾನ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos