ಸಂಸದ ನಾರಾಯಣ ಸ್ವಾಮಿಗೆ ಗ್ರಾಮ ಪ್ರವೇಶದಿಂದ ನಿರ್ಬಂಧ!

ಸಂಸದ ನಾರಾಯಣ ಸ್ವಾಮಿಗೆ ಗ್ರಾಮ ಪ್ರವೇಶದಿಂದ ನಿರ್ಬಂಧ!

ಬೆಂಗಳೂರು, ಸೆ, 17: ನಾಲ್ಕು ಬಾರಿ ಶಾಸಕ  ಒಂದು ಬಾರಿ ಸಚಿವರಾಗಿರುವ ಬಿಜೆಪಿ ಸಂಸದರಾದ  ಎ ನಾರಾಯಣ ಸ್ವಾಮಿ  ನಿನ್ನೆ ಚಿತ್ರದುರ್ಗ ಕ್ಕೆ ತೆರಳಿದ ಸಂಧರ್ಭದಲ್ಲಿ ಹರಿಜನ ಎಂಬ ಕಾರಣಕ್ಕೆ ಊರ ಒಳಕ್ಕೂ ಬಿಟ್ಟು ಕೊಳ್ಳದೆ  ವಾಪಸ್ ಕಳುಹಿಸಿರುವ ಘಟನೆ  ಚಿತ್ರದುರ್ಗದ ಪೆಮ್ಮನಹಳ್ಳಿ ಗೊಲ್ಲರ ಹಟ್ಟಿಯಲ್ಲಿ ನಡೆದಿದೆ.

ಇದರಿಂದ ಸಂಸದರು ಇರಿಸು ಮುರಿಸು ಅನುಭವಿಸುವಂತಾಯಿತು. ನಾರಾಯಸ್ವಾಮಿ  ನಿನ್ನೆ ಚಿತ್ರದುರ್ಗ ಗ್ರಾಮಕ್ಕೆ ವಿವಿಧ ಸವಲತ್ತುಗಳನ್ನು ಕಲ್ಪಿಸಲು ಬೆಂಗಳೂರು ಬಯೋಕಾನ್ ಕಂಪನಿ ಹಾಗೂ  ನಾರಾಯಣ ಹೃದಾಯಾಲಯ ಅಧಿಕಾರಿಗಳ  ಜೊತೆ ತೆರಳಿದಾಗ ಊರಿನ ಮುಖಂಡರು ಯುವಕರು ಹಾಗೂ ಮಹಿಳೆಯರು ಹಟ್ಟಿಯ ಪ್ರವೇಶ ದ್ವಾರಕ್ಕೆ ಕುರ್ಚಿಗಳನ್ನು ತಂದು ಹಾಕಿ ಸಂಸದರನ್ನು ಅಲ್ಲೆ ತಡೆದು ಸಂಪ್ರದಾರದ ಪ್ರಕಾರ  ಮಾದಿಗ ಜನಾಂಗ  ಹಟ್ಟಿಯೊಳಗೆ ಹೋಗಲು ಬಿಡುವುದಿಲ್ಲ ಎಂದು  ನಿರ್ಬಂಧ ಹೇರಿದರು.

ಈ ಅನಿಷ್ಠ ಪದ್ದತಿಯನ್ನು ಕೈಬಿಡಿ ಎಂದು ಸಂಸದರು ಹೇಳಿದರು  ಊರಿನ ಜನರು ಒಪ್ಪಲಿಲ್ಲ ಒಟ್ಟಾರೆ ಹೇಳೋದಾದರೆ ದೇಶ ಅಭಿವೃದ್ದಿ ಪಥದತ್ತ ಸಾಗುತ್ತಿದ್ದರು ಈ ಜಾತಿ ಬೇರು ಅನ್ನೂದು ಇನ್ನು ಕೂಡ ಬೆಳೆದು ಕೊಂಡೆ ಹೋಗ್ತಿದೆ. ಜನರು ಮೂಢನಂಬಿಕೆಯಿಂದ ಮೂಡರಾಗ್ತಿದ್ದಾರೆ.  ಈ ಜಾತಿ ಎನ್ನುವುದು ಎಲ್ಲಿಯವರೆಗೂ ಬೆಳೆದುಕೊಂಡು ಹೋಗುತ್ತಿರುತ್ತದೆಯೋ ಅಲ್ಲಿಯವರೆಗೂ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.

ಒಟ್ಟಾರೆ ಈ ಘಟನೆಯಿಂದ ನಾರಾಯಣಸ್ವಾಮಿ ಅವರ ಮನಸ್ಸಿಗೆ ಅಕ್ಷರಶಃ ನೋವಾಗಿತ್ತು. ಒಬ್ಬ ಸಂಸದನಾಗಿ ಅವರು ಪೊಲೀಸ್ ರಕ್ಷಣೆಯೊಂದಿಗೆ ಗ್ರಾಮದೊಳಗೆ ಬಲವಂತವಾಗಿ ಪ್ರವೇಶಿಸುವ ಅಧಿಕಾರ ಇತ್ತು. ಹಾಗೆಯೇ, ದಲಿತರ ಮೇಲೆ ದೌರ್ಜನ್ಯ ಮಾಡಿದ ಆರೋಪ ಹೊರಿಸಿ ಗ್ರಾಮಸ್ಥರನ್ನು ಕಾನೂನು ಕಟಕಟೆಗೆ ನಿಲ್ಲಿಸುವ ಅವಕಾಶವೂ ಇತ್ತು. ಆದರೆ, ಚಿತ್ರದುರ್ಗದ ಸಂಸದರು ಇದ್ಯಾವುದಕ್ಕೂ ಮುಂದಾಗದೇ ಮಾನವೀಯತೆ ಮೆರೆದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಈ ಘಟನೆಯ ಬಗ್ಗೆ ಮಾತನಾಡಿದ ಬಿಜೆಪಿ ಸಂಸದ, ಬಲವಂತದಿಂದ ಬದಲಾವಣೆ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿರು. “ಅವರ ಮನಃಸ್ಥಿತಿಯನ್ನು ಬದಲಿಸಬೇಕಿದೆ. ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಅಸ್ಪೃಶ್ಯತೆ ಈಗಲೂ ಅಸ್ತಿತ್ವದಲ್ಲಿರುವುದು ನಿಜ. ಹೃದಯ ಪರಿವರ್ತನೆ ಬಹಳ ಮುಖ್ಯ. ಕಾನೂನುಗಳಿಂದ ಅದು ಸಾಧ್ಯವಿಲ್ಲ” ಎಂದು ಎ. ನಾರಾಯಣಸ್ವಾಮಿ ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos