‘ವಿಐಎಸ್ಎಲ್’ ಯು ಪುನಶ್ಚೇತನಗೊಳಿಸಲು ಒತ್ತಾಯ

‘ವಿಐಎಸ್ಎಲ್’ ಯು ಪುನಶ್ಚೇತನಗೊಳಿಸಲು ಒತ್ತಾಯ

ಬೆಂಗಳೂರು, ಜು. 24 : ಭದ್ರಾವತಿ ವಿಐಎಸ್​ಎಲ್ ವಿಶ್ವೇಶ್ವರಾಯ ಉಕ್ಕು ಕಾರ್ಖಾನೆ ಸೇರಿ ದೇಶದ ಮೂರು ಉಕ್ಕು ಕಾರ್ಖಾನೆಗಳನ್ನು ಮುಚ್ಚುವ ಪ್ರಕ್ರಿಯೆ ಆರಂಭವಾಗಿದ್ದು, ಸರ್ ಎಂ. ವಿಶ್ವೇಶ್ವರಾಯ ಆರಂಭಿಸಿದ ದೇಶದ ಮೊಟ್ಟ ಮೊದಲ ಸಾರ್ವಜನಿಕ ಉಕ್ಕು ಉತ್ಪಾದನಾ ಸಂಸ್ಥೆ ಪುನಶ್ಚೇತನಗೊಳಿಸಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ. ದೊಡ್ಡ ಮೊತ್ತದ ಬಂಡವಾಳ ಹೂಡಿಕೆ ಬದಲಿಗೆ ಮುಚ್ಚುವುದೇ ಲೇಸು ಎಂಬ ತೀರ್ವನವೇ ಮೇಲುಗೈ ಪಡೆಯುವ ಲಕ್ಷಣಗಳಿವೆ. ಕೇಂದ್ರ ಸರ್ಕಾರವೇ ಅಗತ್ಯ ಬಂಡವಾಳ ಹೂಡಿ ಗತವೈಭವ ಮರುಕಳಿಸುವಂತೆ ಮಾಡಬೇಕೆಂಬ ಪ್ರಯತ್ನಗಳಿಗೆ ಫಲ ಸಿಕ್ಕಿಲ್ಲ.

ಖಾಸಗಿ  ಮಾರಾಟ ಮಾಡುವ ಪ್ರಯತ್ನಗಳೂ ಸದ್ದಿಲ್ಲದೆ ನಡೆದಿವೆ. ಊದು ಕುಲುಮೆ ಅಧ್ಯಯನ ನೆಪದಲ್ಲಿ ದಕ್ಷಿಣ ಕೊರಿಯಾದ ಸಂಸ್ಥೆಯೊಂದು ಇಡೀ ಕಾರ್ಖಾನೆಯ ಸ್ಥಿತಿಗತಿ ಮಾಹಿತಿ ಸಂಗ್ರಹ ಮಾಡಿದೆ.  2016ರಲ್ಲಿ ನೀತಿ ಆಯೋಗ ಈ ಕಾರ್ಖಾನೆಯನ್ನು ಬಂಡವಾಳ ಹಿಂತೆಗೆತ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ. ಇದನ್ನು ಹೊರತೆಗೆಯುವ ಪ್ರಯತ್ನ ನಡೆದಿಲ್ಲ. ಪುನಶ್ಚೇತನದ ಏಕೈಕ ಷರತ್ತಿನೊಂದಿಗೆ ರಾಜ್ಯ ಸರ್ಕಾರ 1989ರಲ್ಲಿ ಕೇವಲ 1 ರೂ.ಗೆ ಈ ಕಾರ್ಖಾನೆಯನ್ನು ಸೈಲ್​ಗೆ (ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ) ವಹಿಸಿತು. ಎಚ್.ಡಿ.ದೇವೇಗೌಡ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕಾರ್ಖಾನೆಯನ್ನು ಪೂರ್ಣ ಪ್ರಮಾಣದಲ್ಲಿ ಸೈಲ್​ಗೆ ವಹಿಸಿ ಅಭಿವೃದ್ಧಿಗೆ ಅಗತ್ಯವಾದ ಬಂಡವಾಳ ಹೂಡಿಕೆ ಮಾಡಬೇಕೆಂದು ಸೂಚನೆ ನೀಡಲಾಗಿತ್ತು. ಆದರೆ, ಯಾವುದೇ ಷರತ್ತುಗಳನ್ನು ಸೈಲ್ ಪಾಲನೆ ಮಾಡಲಿಲ್ಲ.

ವಿಶ್ವೇಶ್ವರಾಯ ಉಕ್ಕು ಕಾರ್ಖಾನೆ, ಭದ್ರಾವತಿ,2 ಅಲಾಯ್ ಸ್ಟೀಲ್ ಪ್ಲಾಂಟ್, ದುರ್ಗಾಪುರ,3 ಸೇಲಂ ಸ್ಟೀಲ್ ಪ್ಲಾಂಟ್, ತಮಿಳುನಾಡು ಮೊದಲು ಬಂಡವಾಳ ಹಿಂತೆಗೆತ ಪಟ್ಟಿಯಿಂದ ವಿ​ಐಎಸ್ಎಲ್​ ಹೊರತೆಗೆಯಬೇಕು.

ಫ್ರೆಶ್ ನ್ಯೂಸ್

Latest Posts

Featured Videos