ವಿಜಯಪುರ : ವಿದ್ಯುತ್ ಟಿಸಿಗೆ ಬಸ್ ಡಿಕ್ಕಿ

ವಿಜಯಪುರ : ವಿದ್ಯುತ್ ಟಿಸಿಗೆ ಬಸ್ ಡಿಕ್ಕಿ

ವಿಜಯಪುರ, ಜು. 3 :ವಿದ್ಯುತ್ ಟಿಸಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಘಟನೆ ವಿಜಯಪುರದ ಇಂಡಿ ಪಟ್ಟಣದಲ್ಲಿ ನಡೆದಿದೆ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಭಾರೀ ಅನಾಹುತ ತಪ್ಪಿದೆ. ಬಳ್ಳಾರಿಯಿಂದ ಇಂಡಿಗೆ ಆಗಮಿಸುತ್ತಿತ್ತು. ಈ ವೇಳೆ ಬಸ್ ವಿದ್ಯುತ್ ಟಿಸಿಗೆ ಡಿಕ್ಕಿ ಹೊಡೆದಿದೆ.

ಟಿಸಿಗೆ ಅಲ್ಲದೆ ರಸ್ತೆಯ ಡಿವೈಡರ್ ಗೂ ಡಿಕ್ಕಿ ಹೊಡೆದಿದೆ. ಪರಿಣಾಮ ಇಂಡಿ ಪಟ್ಟಣದ ಸ್ಟೇಟ್ ಬ್ಯಾಂಕ್ ಕಟ್ಟಡಕ್ಕೆ ಬಸ್ ನುಗ್ಗಿದೆ. ಬಸ್ ಡಿಕ್ಕಿಯಾದ ಕೂಡಲೇ ಟಿಸಿ ಟ್ರಿಪ್ ಆಗಿದೆ. ಇದನ್ನು ಅರಿತ ಹೆಸ್ಕಾಂನ ಇಂಡಿ ಶಾಖಾಧಿಕಾರಿ ಗುರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಈ ಅವಘಡದ ಬಳಿಕ ಪ್ರಯಾಣಿಕರು ಬೇರೆ ಬಸ್‍ನಲ್ಲಿ ತೆರಳಿದ್ದಾರೆ. ಇಂಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos