ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ ಆರೋಪಿ ಬಂಧನ

ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ ಆರೋಪಿ ಬಂಧನ

ಬಸವನ ಬಾಗೇವಾಡಿ, ಜೂನ್.11, ನ್ಯೂಸ್ ಎಕ್ಸ್ ಪ್ರೆಸ್ : ದೇವರು ಎಂದರೆ ಎಲ್ಲ ಮಾನವರು ಭಕ್ತಿಯಿಂದ ಪೂಜಿಸುವರು, ಕೈ ಮುಗಿವುವರು ತಮ್ಮ ನೋವನ್ನು ದೇವರ ಮುಂದೆ ಹೇಳಿಕೊಳ್ಳುತ್ತಾರೆ, ದೇವರಿಗೆ ಹೂವಿನ ಹಾರ ಹಾಕುವ ಬದಲು ಚಪ್ಪಲಿ ಹಾರ ಹಾಕಿ ಅಮಾನವೀಯತೆ ಕೃತ್ಯ ನಡೆದಿರುವುದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಡೆದಿದೆ.

ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದ ಆರೋಪಿ ಬಸಪ್ಪ ಚಂದ್ರಾಮಪ್ಪ ದೊಡ್ಡಮನಿ ಬಂಧಿತ ಆರೋಪಿ. ಗ್ರಾಮದ ಬಸವೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿನ ನಂದಿ ವಿಗ್ರಹಕ್ಕೆ ಚಪ್ಪಲಿಹಾರ ಹಾಕಿದ ಹಿನ್ನಲೆ ಗ್ರಾಮದಲ್ಲಿ  ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

‘’3 ಲಕ್ಷ ಸಾಲ ಮಾಡಿಕೊಂಡಿದ್ದು ಸಂಸಾರದ ತಾಪತ್ರಯವೂ ಬಹಳಷ್ಟಿದೆ.  ಈ ಹಿನ್ನಲೆಯಲ್ಲಿ ನೊಂದುಕೊಂಡಿದ್ದ ಆರೋಪಿ ಬಸಪ್ಪ ತನ್ನ ಇಷ್ಟಾರ್ಥವನ್ನು ಕೂಡಲೇ ನಿವಾರಣೆ ಮಾಡುವಂತೆ ನಿತ್ಯ ಬಸವೇಶ್ವರ ದೇವಸ್ಥಾನಕ್ಕೆ ಬಂದು ಬೇಡಿಕೊಂಡು ಹೋಗುತ್ತಿದ್ದ. ಆದರೆ, ದೇವರು ತನ್ನ ಕೋರಿಕೆಯನ್ನು ಇದುವರೆಗೂ ಈಡೇರಿಸಲಿಲ್ಲ ಎಂದು ಹೇಳಿ ಶನಿವಾರ ಬೆಳಗ್ಗೆ ನಂದಿ ಮೂರ್ತಿಗೆ ಚಪ್ಪಲಿ ಹಾರ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos