ಈಶ್ವರಪ್ಪ ನಾಮಪತ್ರ ಸಲ್ಲಿಕೆ, ಹಿಂಪಡೆಯಲು ಇನ್ನೂ ಸಮಯವಿದೆ: ವಿಜಯೇಂದ್ರ

ಈಶ್ವರಪ್ಪ ನಾಮಪತ್ರ ಸಲ್ಲಿಕೆ, ಹಿಂಪಡೆಯಲು ಇನ್ನೂ ಸಮಯವಿದೆ: ವಿಜಯೇಂದ್ರ

ಬಳ್ಳಾರಿ: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಅಭ್ಯರ್ಥಿಗಳು ಭರ್ಜರಿ ಮತಯಾಚಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಗನಿಗೆ ಟಿಕೆಟ್ ಸಿಗಲಿಲ್ಲವೆಂದು ಕೆ.ಎಸ್ ಈಶ್ವರಪ್ಪ ನವರು ಶಿವಮೊಗ್ಗದಲ್ಲಿ ಬಂಡಾಯ ಸ್ಪರ್ಧೆ ಮಾಡಲಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಣಕ್ಕಿಳಿಯುತ್ತಿದ್ದು ಇಂದು ನಾಮಪತ್ರ  ಸಲ್ಲಿಕೆ ಮಾಡಿದರು.

ಈಶ್ವರಪ್ಪ ನಾಮಪತ್ರ ಸಲ್ಲಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾದು ನೋಡಿ ಎಂದಿದ್ದಾರೆ. ಬಳ್ಳಾರಿ-ವಿಜಯನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಇನ್ನೂ ನಾಮಪತ್ರ ವಾಪಾಸ್ ಪಡೆಯಲು ಸಮಯವಿದೆ. ಹೊಸ ಚರ್ಚೆಗಳು ಬೇಡಿ.‌ ಕಾದು ನೋಡಿ ಎಂದು ಹೇಳಿದರು. ನಾವು 28 ಸ್ಥಾನಗಳು ಗೆಲ್ಲಬೇಕು ಅನ್ನೋ ಗುರಿ ಇದೆ ಅಷ್ಟೆ. ಹೆಚ್ಚು ಸ್ಥಾನ ಗೆದ್ರೆ, ವಿಜಯೇಂದ್ರ ಸ್ಥಾನ ಗಟ್ಟಿಯಾಗುತ್ತದೆ ಎಂದು ತಿಳಿಸಿದರು.‌

ಫ್ರೆಶ್ ನ್ಯೂಸ್

Latest Posts

Featured Videos