ನಾಲ್ಕನೇ ಕ್ರಮಾಂಕಕ್ಕೆ ವಿಜಯ್ ಶಂಕರ್ ಅಚ್ಚರಿ ಆಯ್ಕೆ?

ನಾಲ್ಕನೇ ಕ್ರಮಾಂಕಕ್ಕೆ ವಿಜಯ್ ಶಂಕರ್ ಅಚ್ಚರಿ ಆಯ್ಕೆ?

ನವದೆಹಲಿ, ಮಾ.20, ನ್ಯೂಸ್ ಎಕ್ಸ್ ಪ್ರೆಸ್: ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತದ ತಂಡದ 4ನೇ ಕ್ರಮಾಂಕಕ್ಕೆ ಯಾರು ಆಯ್ಕೆಯಾಗುತ್ತಾರೆ ಎನ್ನುವ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.

ಬಿಸಿಸಿಐ ಮೂಲಗಳ ಪ್ರಕಾರ, ಈ ಕ್ರಮಾಂಕಕ್ಕೆ ಮಧ್ಯಮ ವೇಗದ ಬೌಲಿಂಗ್ ಆಲ್ರೌಂಡರ್ ವಿಜಯ್ ಶಂಕರ್ ಆಯ್ಕೆ ಬಹುತೇಕ ಖಚಿತವಾಗುವ ಸಾಧ್ಯತೆ ಇದೆ. ಈ ಸ್ಥಾನಕ್ಕೆ ಅಂಬಟಿ ರಾಯುಡು ಮತ್ತು ವಿಜಯ್ ಶಂಕರ್ ನಡುವೆ ಪೈಪೋಟಿಯಿದ್ದರೂ, ಇತ್ತೀಚಿಗಿನ ಫಾಮರ್್​ನಂತೆ ಅಂಬಟಿ ರಾಯುಡುಗೆ ಈ ಸ್ಥಾನ ಒಲಿಯುವ ಸಾಧ್ಯತೆ ಕಡಿಮೆಯಾಗಿದೆ.

ವಿಜಯ್ ಶಂಕರ್ ಬಲಿಷ್ಠ ತಂಡಗಳ ಎದುರು ತಾಂತ್ರಿಕವಾಗಿ ಹಾಗೂ ಒತ್ತಡದ ಸನ್ನಿವೇಶದಲ್ಲಿ ಧೈರ್ಯದಲ್ಲಿ ಆಡಿದರೆ, ರಾಯುಡು ಇದರಲ್ಲಿ ವಿಫಲರಾಗಿದ್ದಾರೆ. ರಾಯುಡು ಆಟ ಶ್ರೀಲಂಕಾ, ಜಿಂಬಾಬ್ವೆ, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್​ನಂಥ ದುರ್ಬಲ ಬೌಲಿಂಗ್ ವಿಭಾಗದ ಎದುರು ಮಾತ್ರವೇ ಬಂದಿರುತ್ತದೆ.

2003ರ ಏಕದಿನ ವಿಶ್ವಕಪ್​ಗೂ ವಿವಿಎಸ್ ಲಕ್ಷ್ಮಣ್ ಬದಲು ಸ್ಪಿನ್ ಬೌಲಿಂಗ್ ಆಲ್ರೌಂಡರ್ ಆಗಿದ್ದ ದಿನೇಶ್ ಮೊಂಗಿಯಾ ಇದೇ ರೀತಿಯ ಅಚ್ಚರಿಯ ಅವಕಾಶ ನೀಡಿದ್ದರೆ, ಇದೇ ಕ್ರಮಾಂಕದಲ್ಲಿ 2011ರ ವಿಶ್ವಕಪ್​ಗೆ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಆಗಿ ಯುವರಾಜ್ ಸಿಂಗ್ ಆಡಿದ್ದರು. ‘ರಾಯುಡು ವೆಲ್ಲಿಂಗ್ಟನ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ 90 ರನ್ ಬಾರಿಸಿದ್ದು ಬಿಟ್ಟರೆ, ಮಧ್ಯಮ ವೇಗದ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸುತ್ತಿಲ್ಲ. ಶಂಕರ್ ಬ್ಯಾಟಿಂಗ್​ನಲ್ಲಿ 2 ವಿಶೇಷತೆಯಿದೆ. ಸುಲಭವಾಗಿ ಸ್ಟ್ರೈಕ್ ರೊಟೇಟ್ ಮಾಡಬಲ್ಲರು, ಪವರ್ ಹಿಟ್ಟರ್ ಕೂಡ ಹೌದು’ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos