ಹಸುವಿನ ಹೊಟ್ಟೆಯಿಂದ 52 ಕೆ.ಜಿ ಪ್ಲಾಸ್ಟಿಕ್ !

ಹಸುವಿನ ಹೊಟ್ಟೆಯಿಂದ 52 ಕೆ.ಜಿ ಪ್ಲಾಸ್ಟಿಕ್ !

ಚನ್ನೈ, ಅ. 25 : 6 ವರ್ಷದ ಹಸುವಿನ ಹೊಟ್ಟೆಯಿಂದ ಬರೋಬ್ಬರಿ 52 ಕೆಜಿ ನಿರುಪಯುಕ್ತ ವಸ್ತುಗಳನ್ನು ಹೊರತೆಗೆದಿದ್ದಾರೆ. ಪ್ಲಾಸ್ಟಿಕ್, ಮದ್ದಿನ ಸೂಜಿಗಳು, ಉಗುರುಗಳು, ಆಹಾರ ಮತ್ತು ನಾಣ್ಯಗಳನ್ನು ಪ್ಯಾಕಿಂಗ್ ಮಾಡಲು ಬಳಸುವ ಅಲ್ಯೂಮಿನಿಯಂ ಫಾಯಿಲ್ ಗಳು. ಹಸುವಿನ ಹೊಟ್ಟೆಯನ್ನು ಶಸ್ತ್ರಕ್ರಿಯೆ ಮಾಡಿ  ಹಾನಿಕಾರಕ ವಸ್ತುಗಳನ್ನು ಹೊರತೆಗೆದಿದ್ದಾರೆ.  ಹಸು ಸರಿಯಾಗಿ ಆಹಾರ ತಿನ್ನುತ್ತಿಲ್ಲ ಮತ್ತು ಅದಕ್ಕೆ ಸುಲಭವಾಗಿ ಸಗಣಿ ಮತ್ತು ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುತ್ತಿದೆ ಎಂದು ಹೇಳಿ ಮುನಿರತ್ನಂ ಎಂಬುವವರು ಪಶುವೈದ್ಯಕೀಯ ಆಸ್ಪತ್ರೆಗೆ ಹಸುವನ್ನು ಕರೆತಂದಿದ್ದರು.

ತಪಾಸಣೆ ನಡೆಸಿದ ವೈದ್ಯರು ಹಸುವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ವಸ್ತುಗಳಿವೆ ಎಂದು ತಿಳಿದು ಅದನ್ನು ಶಸ್ತ್ರಕ್ರಿಯೆ ಮಾಡಿ ಹೊರತೆಗೆಯೋಣವೆಂದು ನಿರ್ಧರಿಸಿದರು. ಹಸು ಈಗ ಆರೋಗ್ಯವಾಗಿದ್ದು ಎಂದಿನಂತೆ ಆಹಾರ ಸೇವಿಸುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos