ವಿದೇಶಿ ಭತ್ಯೆ ಪಡೆಯಲಿರುವ ಇಂಡಿಯಾ ಆಟಗಾರರು

ವಿದೇಶಿ ಭತ್ಯೆ ಪಡೆಯಲಿರುವ ಇಂಡಿಯಾ ಆಟಗಾರರು

ನವದೆಹಲಿ, ಸೆ. 23 : ವಿದೇಶಿ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ತೋರಿದ ಟೀಂ ಇಂಡಿಯಾ ಆಟಗಾರರಿಗೆ ದಿನ 125 ಡಾಲರ್ ಬದಲು 250 ಡಾಲರ್ ಬಿಸಿಸಿಐ ಡಬಲ್ ಮಾಡಿದೆ.
ವಿರಾಟ್ ಕೊಹ್ಲಿ ನೇತೃತ್ವದ ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಸಿಹಿ ಸುದ್ದಿ ನೀಡಿದೆ. ಸದ್ಯ ಪ್ರತಿ ದಿನ 125 ಡಾಲರ್ (8,900 ರು.) ಪಡೆಯುತ್ತಿರುವ ಆಟಗಾರರು, ಮುಂದಿನ ವಿದೇಶಿ ಪ್ರವಾಸಗಳಿಂದ 250 ಡಾಲರ್ (17,800 ರು.) ಗಳಿಸಲಿದ್ದಾರೆ. ಆದರೆ ಭಾರತದಲ್ಲಿ ಪಡೆಯುತ್ತಿದ ದಿನಭತ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಭಾರತ ತಂಡವು ಕಳೆದ ವರ್ಷಾಂತ್ಯದ ವೇಳೆಗೆ ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಬೀಗಿತ್ತು. ಇನ್ನು ಕಳೆದ ತಿಂಗಳು ನಡೆದ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಚಾಂಪಿಯನ್ ಶಿಪ್’ನಲ್ಲಿ 2-0 ಅಂತರದಲ್ಲಿ ಜಯಿಸಿತ್ತು. ಭಾರತ ತಂಡವು 2020ರ ವರ್ಷಾರಂಭದ ವೇಳೆಗೆ ನ್ಯೂಜಿಲೆಂಡ್ ಪ್ರವಾಸ್ ಕೈಗೊಳ್ಳಲಿದ್ದು, ಆಗ ನೂತನ ವಿದೇಶಿ ಭತ್ಯೆ ಪಡೆಯಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos