ಸ್ನಾನ ವಿಡಿಯೋ ಮಾಡಿದ ಪೇದೆ

ಸ್ನಾನ ವಿಡಿಯೋ ಮಾಡಿದ ಪೇದೆ

ಜಮ್ಮು, ಜು, 6 : ಅಮರನಾಥ ಯಾತ್ರಾ ಶಿಬಿರದಲ್ಲಿ ಮಹಿಳಾ ಭಕ್ತೆ ಸ್ನಾನದ ಹಿನ್ನಲೆ ವಿಡಿಯೋ ಮಾಡಿದ್ದ ಪೊಲೀಸ್ ಕಾನ್ಸ್ಟೇಬಲ್ನನ್ನು ಬಂಧಿಸಿ ಬಿಡುಗಡೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ತಾರಿಕ್ ಅಹ್ಮದ್ ಬಂಧಿತ ಪೊಲೀಸ್ ಕಾನ್ಸ್ಟೇಬಲ್. ಮಹಿಳೆ ಅಮರನಾಥ್ ಯಾತ್ರೆಗೆ ಬಂದಿದ್ದರು. ಬುಧವಾರ ರಾತ್ರಿ ರೈಲ್ವೇ ನಿಲ್ದಾಣದ ಬಳಿ ಶಿಬಿರದಲ್ಲಿ ಸ್ನಾನ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ತಾರಿಕ್, ತನ್ನ ಮೊಬೈಲ್ನಲ್ಲಿ ಮಹಿಳೆಗೆ ತಿಳಿಯದಂತೆ ವಿಡಿಯೋ ಮಾಡಿದ್ದಾನೆ. ಇದನ್ನು ಗಮನಿಸಿದ ಮಹಿಳೆ ತಕ್ಷಣ ಕಿರುಚಾಡಿದ್ದಾರೆ. ತಕ್ಷಣ ಸ್ಥಳದಲ್ಲಿದ್ದವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತ್ರಿಕುಟಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಾರಿಕ್ ನನ್ನು ಬಂಧಿಸಿದ್ದಾರೆ. ಜಾಮೀನಿನ ಮೂಲಕ ಆತನನ್ನು ಬಿಡುಗಡೆ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos