ವಿಚಿತ್ರ ವಿಗ್ ಧರಿಸಿ ಸಿಕ್ಕಿಬಿದ್ದ ಕಳ್ಳ

ವಿಚಿತ್ರ ವಿಗ್ ಧರಿಸಿ ಸಿಕ್ಕಿಬಿದ್ದ ಕಳ್ಳ

ತಿರುವನಂತಪುರಂ, ಅ. 6 : ಕಳ್ಳಸಾಗಾಣಿಕೆದಾರರು ವಿವಿಧ ರೀತಿಯಲ್ಲಿ ಚಿನ್ನ, ವಜ್ರ, ಡ್ರಗ್ ಸೇರಿದಂತೆ ಮುಂತಾದವುಗಳನ್ನು ಕಳವು ಮಾಡುತ್ತಾರೆ. ಆದರೆ ಕೇರಳದ ಮೂಲದ ವ್ಯಕ್ತಿಯೊಬ್ಬ ವಿಚಿತ್ರವಾಗಿ ತನ್ನ ತಲೆ ಕೂದನ್ನು ಕತ್ತರಿಸಿ ಮಧ್ಯದಲ್ಲಿ ವಿಗ್ ಧರಿಸಿಕೊಂಡು ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ್ದು, ಕೊನೆಗೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.
ಆರೋಪಿಯನ್ನು ಮಲಪ್ಪುರಂನ ನೌಶಾದ್ ಎಂದು ಗುರುತಿಸಲಾಗಿದೆ. ಆರೋಪಿ ನೌಶಾದ್ ಯುಎಇಯ ಶಾರ್ಜಾದಿಂದ ವಿಮಾನ ನಿಲ್ದಾಣಕ್ಕೆ ಬಂದಿದ್ದನು. ಈತ ನೆತ್ತಿಯ ಮಧ್ಯದ ಸುತ್ತ ಕೂದಲನ್ನು ಬೋಳಿಸಿಕೊಂಡು. ತಲೆಯ ಮಧ್ಯ ಭಾಗದಲ್ಲಿ ವಿಗ್ ಅಡಿಯಲ್ಲಿ 1.13 ಕೆಜಿ ಚಿನ್ನವನ್ನು ಸಾಗಾಟ ಮಾಡಲು ಯತ್ನಿಸಿದ್ದನು.

ಫ್ರೆಶ್ ನ್ಯೂಸ್

Latest Posts

Featured Videos