ವೇಗಿ ಶಮಿ ‘ಲಫಂಗಾ’ ಎಂದು ಜರಿದ ಪತ್ನಿ..!

ವೇಗಿ ಶಮಿ ‘ಲಫಂಗಾ’ ಎಂದು ಜರಿದ ಪತ್ನಿ..!

ಲಂಡನ್, ಜೂ. 28 : ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಬೆನ್ನಲ್ಲೇ ಶಮಿಯ ಚಾರಿತ್ರ್ಯಹರಣಕ್ಕೆ ಹಸೀನ್ ಮುಂದಾಗಿದ್ದಾರೆ. ತಮ್ಮ ಫೇಸ್​ಬುಕ್ ಖಾತೆಯಲ್ಲಿ ಮೊಹಮ್ಮದ್ ಶಮಿ ವೈಯುಕ್ತಿಕ ವಿಚಾರಗಳನ್ನು ಪೋಸ್ಟ್​ ಮಾಡಿರುವ ಹಸೀನ್ ಜಹಾನ್, ತಮ್ಮ ಪತಿಯ ಇನ್ನೊಂದು ಮುಖವನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಶಮಿ ಅವರ ಟಿಕ್ ಟಾಕ್ ನ ಫಾಲೋ ಲೀಸ್ಟ್​ ಸ್ಕ್ರೀನ್ ಶಾಟ್​ ಬಹಿರಂಗ ಪಡಿಸಿರುವ ಹಸೀನ್, ‘ಲಫಂಗ ಮೊಹಮ್ಮದ್ ಶಮಿ ಟಿಕ್ ಟಾಕ್ ಅಕೌಂಟ್ ತೆರೆದಿದ್ದೇನೆ. ಆತ 97 ಮಂದಿಯನ್ನು ಫಾಲೋ ಮಾಡುತ್ತಿದ್ದು, ಅದರಲ್ಲಿ 90 ಹುಡುಗಿಯರು. ಒಂದು ಮಗುವಿನ ತಂದೆಯಾಗಿ ಇದು ನಾಚಿಕೆಗೇಡು’ ಎಂದು ಪೋಸ್ಟ್​ ಮಾಡಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos