ವೇಗದ ಬೌಲರ್ ನುವಾನ್ ನಿವೃತ್ತಿ?

ವೇಗದ ಬೌಲರ್ ನುವಾನ್ ನಿವೃತ್ತಿ?

ಕೊಲಂಬೊ,ಜು. 25 : ಶ್ರೀಲಂಕಾದ ವೇಗದ ಬೌಲರ್ ನುವಾನ್ ಕುಲಸೇಖರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. 2009ರ ಐಸಿಸಿ ಏಕದಿನ ರ್ಯಾಕಿಂಗ್ ನಲ್ಲಿ ಪಟ್ಟಿಯಲ್ಲಿ ಕುಲಸೇಖರ ನಂ.1 ಬೌಲರ್ ಎನಿಸಿದ್ದ 37 ವರ್ಷದ ಕುಲಸೇಖರ 184 ಏಕದಿನ ಪಂದ್ಯಗಳಿಂದ 199 ವಿಕೆಟ್ ಪಡೆದಿದ್ದಾರೆ. ಇನ್ನು 58 ಟಿ20 ಪಂದ್ಯಗಳಲ್ಲಿ 66 ವಿಕೆಟ್ ಪಡೆದಿದ್ದಾರೆ. 15 ವರ್ಷ ಕ್ರಿಕೆಟ್ ವೃತ್ತಿ ಜೀವನದಲ್ಲಿ ಕುಲಸೇಖರ 21 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು 48 ವಿಕೆಟ್ ಪಡೆದಿದ್ದಾರೆ.
ಕುಲಸೇಖರ 2017ರ ಜುಲೈನಲ್ಲಿ ಜಿಂಬಾಬ್ವೆ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. 2018ರ ಮಾರ್ಚ್ ಬಳಿಕ ಕುಲಸೇಖರ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿರಲಿಲ್ಲ. ಇನ್ನು 2019ರ ಏಕದಿನ ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯಲು ವಿಫಲವಾಗಿದ್ದರು. 2011ರ ಏಕದಿನ ವಿಶ್ವಫೈನಲ್ ಪಂದ್ಯದಲ್ಲಿ ಕುಲಶೇಖರ ಬೌಲಿಂಗ್’ನಲ್ಲೇ ಧೋನಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ 28 ವರ್ಷಗಳ ಬಳಿಕ ವಿಶ್ವಕಪ್ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದರು. ಆ ಕ್ಷಣ ಭಾರತ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ.

ಫ್ರೆಶ್ ನ್ಯೂಸ್

Latest Posts

Featured Videos