ತರಕಾರಿ ಜೂಸ್..

ತರಕಾರಿ ಜೂಸ್..

ಬೆಂಗಳೂರು, ಡಿ. 13 : ತರಕಾರಿ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಅನುಕೂಲಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಅನೇಕರಿಗೆ ಹಾಗಲಕಾಯಿ ಹಾಗೂ ಬೀಟ್ ರೂಟ್ ಅಂದ್ರೆ ಅದೇನೊ ಅಲರ್ಜಿ. ಎರಡು ತರಕಾರಿಗಳಿಂದ ಸಿಗುವ ಪ್ರಯೋಜನಗಳು ಅಷ್ಟಿಷ್ಟಲ್ಲ. ಬೀಟ್ ರೂಟ್ ಅನ್ನು ದಿನನಿತ್ಯ ತಿನ್ನುವುದರಿಂದ ನಮ್ಮ ದೇಹದಲ್ಲಿನ ರಕ್ತ ಸ್ವಚ್ಛವಾಗುತ್ತದೆ ಎನ್ನುತ್ತಾರೆ ವೈದ್ಯರು. ರಕ್ತಹೀನತೆಯ ಸಮಸ್ಯೆಯಿದ್ದರೂ ಬೀಟ್ ರೂಟ್ಗಳನ್ನು ಸೇವಿಸುವುದರಿಂದ ಪರಿಹಾರ ಕಾಣಬಹುದು. ಹಸಿಯಾಗಿ ಅಥವಾ ಬೇಯಿಸಿ ತಿನ್ನಬಹುದಾದ ಈ ತರಕಾರಿಯ ಜ್ಯೂಸ್ನಿಂದ ಸಿಗುವ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಬೀಟ್ ರೂಟ್ನಲ್ಲಿ ಆ್ಯಂಟಿ-ಆ್ಯಕ್ಸಿಡೆಂಟ್ಸ್ ಅಂಶಗಳು ಹೇರಳವಾಗಿದೆ. ಇದರೊಂದಿಗೆ ಕ್ಯಾಲ್ಸಿಯಂ, ಮೆಗ್ನಿಷಿಯಂ, ಐರನ್, ಸೋಡಿಯಂ, ಪೊಟ್ಯಾಷಿಯಂ, ಫಾಸ್ಪರಸ್, ಕ್ಲೋರಿನ್ ಮತ್ತು ಐಯೋಡಿನ್ ಸೇರಿದಂತೆ ಅನೇಕ ಪ್ರಮುಖ ಜೀವ ಸತ್ವಗಳನ್ನು ಹೊಂದಿರುವ ತರಕಾರಿ ಬೀಟ್ ರೂಟ್.
ಇಷ್ಟೆಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುವ ಇದರ ರಸವನ್ನು ಕುಡಿದರೆ ಒಂದೇ ಬಾರಿ ಅನೇಕ ಆರೋಗ್ಯಕಾರಿ ಪ್ರಯೋಜನಗಳು ಲಭಿಸುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos