ವೇದಿಕೆಯಲ್ಲೇ ಕುಸಿದುಬಿದ್ದ ಕೇಂದ್ರ ಸಚಿವ

ವೇದಿಕೆಯಲ್ಲೇ ಕುಸಿದುಬಿದ್ದ ಕೇಂದ್ರ ಸಚಿವ

ಮುಂಬೈ, ಆ.1: ಇಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಮಹಾರಾಷ್ಟ್ರದ ಸೊಲ್ಹಾಪುರ ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆಗೆ ಎದ್ದು ನಿಂತಿದ್ದ ವೇಳೆ ವೇದಿಕೆಯಲ್ಲೇ ಕುಸಿದುಬಿದ್ದಿದ್ದಾರೆ.

ಕೆಲ ವರ್ಷಗಳಿಂದ ನಿತಿನ್ ಗಡ್ಕರಿ ಅವರ ಆರೋಗ್ಯ ಹದಗೆಟ್ಟಿದೆ. ಈ ಹಿಂದೆ ಕೂಡ ಕೆಲವು ಸಮಾರಂಭಗಳಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಕಳೆದ ವರ್ಷ ಮಹಾರಾಷ್ಟ್ರದ ರಾಹುರಿ ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ನಿತಿನ್ ಗಡ್ಕರಿ ವೇದಿಕೆಯಲ್ಲೇ ಕುಸಿದುಬಿದ್ದಿದ್ದರು. ಪ್ರಜ್ಞಾಹೀನರಾಗಿ ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತು. ಆ ಸಂದರ್ಭದಲ್ಲಿ ಕೂಡ ರಾಷ್ಟ್ರಗೀತೆ ವೇಳೆ ಎದ್ದು ನಿಂತಾಗಲೇ ಕುಸಿದುಬಿದ್ದಿದ್ದು ವಿಪರ್ಯಾಸ. ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ, ಆಮ್ಲಜನಕ ಕೂಡ ಕಡಿಮೆಯಾದ್ದರಿಂದ ಉಸಿರಾಟದ ತೊಂದರೆಯಿಂದ ಕಳೆದ ವರ್ಷ ಘಟಿಕೋತ್ಸವದಲ್ಲಿ ಕುಸಿದು ಬಿದ್ದಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos