ಮತದಾನಕ್ಕೆ ವರುಣನ ಅಡ್ಡಿ

ಮತದಾನಕ್ಕೆ ವರುಣನ ಅಡ್ಡಿ

ಕೇರಳ, ಅ. 21: ಇಂದು 18 ರಾಜ್ಯಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಹಲವಾರು ಭಾಗಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಮತದಾನಕ್ಕೆ ಅಡ್ಡಿಯಾಗುವ ಆತಂಕ ಒಡ್ಡಿದೆ.

ಕೇರಳದಲ್ಲಿ ಭಾರೀ ಮಳೆಯಾಗಿಯಾಗುವ ಮುನ್ಸೂಚನೆ ಇದ್ದು, ಉಪಚುನಾವಣೆ ನಡೆಯುವ 5 ಕ್ಷೇತ್ರದ ಜನ ಬೆಳಗ್ಗೆಯೇ ಸಾಲಾಗಿ ನಿಂತು ತಮ್ಮ ಮತವನ್ನು ಚಲಾಯಿಸಿದ್ದಾರೆ ಎಂದು ವರದಿಯಾಗಿದೆ.

ವರ್ತೂರ್ಕಾವ್ (ತಿರುವನಂತಪುರಂ), ಅರೂರ್ (ಅಲಪುಲ), ಕೊನ್ನಿ(ಪತ್ತನಂತಿಟ್ಟ), ಎರ್ನಾಕುಲಂ ಹಾಗೂ ಮಂಜೇಶ್ವರಂ (ಕಾಸರಗೋಡು) ಸೇರಿದಂತೆ 5 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಸುಮಾರು 9.57 ಲಕ್ಷ ಮತದಾರರು ಚುನಾವಣೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಈ ಕ್ಷೇತ್ರಗಳಲ್ಲಿ ಒಟ್ಟು 896 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಆದರೆ, ಇದೀಗ ಲಭ್ಯವಾಗುತ್ತಿರುವ ವರದಿಯ ಪ್ರಕಾರ ಮಂಜೇಶ್ವರ ಹೊರತುಪಡಿಸಿ ಇತರೆ 4 ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು, ಮತದಾನ ಪ್ರಕ್ರಿಯೆಗೆ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos