ವರಮಹಾಲಕ್ಷ್ಮಿ ಹಬ್ಬದ; ಸಾಮಗ್ರಿ ಖರಿದೀಸಲು ಹರಿದು ಬಂದ ಜನ ಸಾಗರ

ವರಮಹಾಲಕ್ಷ್ಮಿ ಹಬ್ಬದ; ಸಾಮಗ್ರಿ ಖರಿದೀಸಲು ಹರಿದು ಬಂದ ಜನ ಸಾಗರ

ಬೆಂಗಳೂರು: ಕೃಷ್ಣರಾಜಪುರಂನ ಮಾರುಕಟ್ಟೆಯಲ್ಲಿ ಇಂದು ವರ ಮಹಲಕ್ಷ್ಮಿ ಹಬ್ಬದ ಪ್ರಯುಕ್ತ ಸಗಟುಗಳನ್ನು ಖರಿದಿಸಲು ಮುಗಿಬಿದ್ದ ಗ್ರಾಹಕರು,

ಕೆ,ಆರ್. ಪುರಂ ಮಾರುಕಟ್ಟೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲು ಜನ ಜಂಗುಳಿಯಲ್ಲಿ ಹೂವು, ಹಣ್ಣು,ಬಾಳೆದಿಂಡು, ಇನ್ನಿತರ ಪೂಜೆಗೆ ಬೇಕಾಗುವ ಸಾಮಾಗ್ರಿಗಳನ್ನು ಖರೀದಿಸಿದರು.

ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆ ಸಾಂಪ್ರದಾಯಿಕ ಹಬ್ಬ ಹರಿ ದಿನಗಳನ್ನು ಮಾತ್ರ ಬಿಟ್ಟಿಲ್ಲ, ಬೆಲೆ ಆಕಾಶಕ್ಕೆ ಏರಿದ್ದರೂ ಕೂಡ ದೇಶದ ಸಂಪ್ರದಾಯ, ಸಂಸ್ಕೃತಿಗೋಸ್ಕರ ಎಷ್ಟೇ ದುಡ್ಡು ಹೋದರು ಪರವಾಗಿಲ್ಲ ಎನ್ನುವ ನಿಟ್ಟಿನಲ್ಲಿ ಹಿಂದೆ ಹಿರಿಯರು ಮಾಡಿದಂತ ಹಬ್ಬಗಳಲ್ಲಿ ವೈಜ್ಞಾನಿಕ  ಶಕ್ತಿ ಇದೆ ಎಂದು ದೃಡ ನಂಬಿಕೆಯಿಂದ ಭಾರತ ದೇಶದ ಎಲ್ಲಾ ಹಬ್ಬಗಳನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಾರೆ.

ಇನ್ನುಕಾಕತಾಳಿಯ ಎಂದು ಹೇಳುವುದಾದರೆ ಭಾರತಿಯರ ಮಹತ್ವದ ಕನಸಾಗಿರುವ ಚಂದ್ರಯಾನ-3  ಜುಲೈ 14 ರಂದು  ಚಂದ್ರಯಾನಕ್ಕೆ ಉಡಾವಣೆ ಮಾಡಿತ್ತು, ಚಂದಪ್ಪನ ಅಂಗಳದಲ್ಲಿ ರೋವರ್ ಹೋಗಿರುವುದು ಇಡಿ ದೇಶವೇ ಹೆಮ್ಮೆ ಪಡುವಂತ ವಿಷಯವಾಗಿದೆ.

ಇನ್ನು ಈ ಸಂತಸದಲ್ಲಿ ಜನರು ಹಬ್ಬವನ್ನು ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ವ್ಯಾಪರಸ್ಥರು ಮಾತ್ರ ಮಿಶ್ರ ಕ್ರಿಯೆ ವ್ಯಕ್ತ ಪಡಿಸಿದ್ದಾರೆ. ನಾವು ರೈತರಲ್ಲಿ ಖರಿದಿ ಮಾಡಿ ತಂದಂತ ಸಮಾಗ್ರಿಗಳಿನ್ನು ಮಾರಲು ಅನುಕೂಲಕರವಾದ ಸ್ಥಳವಿಲ್ಲ, ಕೆಲವು ಸಗಟುಗಳನ್ನು ಗ್ರಾಹಕರು ಅಡ್ಡ ದುಡ್ಡಿ ಕೇಳುತ್ತಾರೆ, ಕೊಟ್ಟಿಲ್ಲ ಅಂದರೆ ನಾಳೆಗೆ ಅದು ಕೆಟ್ಟು ಹೋಗುತ್ತೆ ಎನ್ನುವ ದೃಷ್ಠಯಿಂದ ಕೊಡಲೇ ಬೇಕಾದ ಅನಿವಾರ್ಯ ಬಂದಿದೆ. ಏನೇ ಆಗಲಿ ಆ ವರಮಹಾಲಕ್ಷ್ಮಿ ಯಾರನ್ನು ಕೈ ಬಿಡುವುದಿಲ್ಲ ಎಂಬ ನಂಬಿಕೆ ನಮಗಿದೆ ಎಂದು ತಹಿಳಿಸಿದರು.

ವರದಿಗಾರ

ಎ.ಚಿದಾನಂದ,ವಿಜಯನಗರ.

ಫ್ರೆಶ್ ನ್ಯೂಸ್

Latest Posts

Featured Videos