ವನಮಹೋತ್ಸವ ಕಾರ್ಯಕ್ರಮ

ವನಮಹೋತ್ಸವ ಕಾರ್ಯಕ್ರಮ

ಕೆ.ಆರ್.ಪುರ, ಜು. 13 : ವನಮಹೋತ್ಸವ ಕಾರ್ಯಕ್ರಮದ ಅಂಗವಾಗಿ ವಿಭೂತಿಕೆರೆ ಕೆರೆ ಅಂಗಳದಲ್ಲಿ ವಿಭೂತಿಪುರ ಕೆರೆ ಸಂರಕ್ಷಣಾ ತಂಡದವರು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟರು. ಕೆರೆಯ ಸುತ್ತಮುತ್ತಲಿನ ಅಂಗಳ ಹಾಗೂ ದಡದ ಅಂಚಿ ನಲ್ಲಿ ವಿವಿಧ ಜಾತಿಯ ಸಸ್ಯಗಳನ್ನು ಸ್ವತಃ ಸಂಚಾಲಕರುಗಳೆ ಗುಂಡಿ ತೋಡಿ ಸಸಿ ನೆಟ್ಟು ನೀರು ಉಣಿಸಿದರು.

ವಿಜ್ಞಾನನಗರ ವಾರ್ಡ್ನ ಹಲವು ಬಡಾವಣೆಗಳ ನಿವಾಸಿಗಳು ವನಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.ಪಾಲಿಕೆಸದಸ್ಯ ಎಸ್ ಜಿ. ನಾಗರಾಜ್ ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರತಿಯೊಬ್ಬರು ಉತ್ತಮ ಮಳೆಯಾಗಲು ಸಸಿಗಳನ್ನು ನೆಡಬೇಕು.ಮನುಷ್ಯ ಪರಿಸರ ಕಾಳಜಿ ಹೊಂದಿದಾಗ ಮಾತ್ರ ನಾಡು ಸಮೃದ್ಧವಾಗಲು ಸಾಧ್ಯವಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ನೀರಿನ ಮಟ್ಟ ವೃದ್ಧಿಸಲು ಹಸಿರುಕಾರಣ ಮಾಡಬೇಕಿದೆ. ವಿಭೂತಿಪುರ ಕೆರೆಯನ್ನು ಹಸಿರು ಪಾರ್ಕ್ ಆಗಿ ಪರಿವರ್ತಿಸಿ ಮಾದರಿ ಕೆರೆಯನ್ನಾಗಿ ಅಭಿವೃದ್ಧಿ ಮಾಡಲಾಗುತ್ತದೆ.

ನಾಲ್ಕು ಕೋಟಿ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ ಇದರಲ್ಲಿ ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ, ಒಪನ್ ಜಿಮ್, ತಂತಿ ಬೇಲಿ, ವಾಕ್ ಟ್ರ್ಯಾಕ್ ನಿರ್ಮಿಸಲಾಗುತ್ತದೆ ಎಂದರು. ಬೆಂಗಳೂರು ನಗರವನ್ನು ಸೆಪ್ಟೆಂಬರ್ ವೇಳೆಗೆ ಸಂಪೂರ್ಣ ವಾಗಿ ಪ್ಲಾಸ್ಟಿಕ್ ಮುಕ್ತವಾಗಿಸಲಾಗುತ್ತದೆ. ಬರಿ ಸಸಿ ನೆಟ್ಟರೆ ಸಾಲದು ಅವುಗಳಿಗೆ ಪ್ರತಿನಿತ್ಯ ನೀರು ಉಣಿಸುವ ಕಾರ್ಯಮಾಡಿ ಸಸಿಗಳನ್ನು ಸಂರಕ್ಷಿಸಿ ಪೋಷಿಸಬೇಕು ಎಂದು ಹೇಳಿದರು.

ಹೆಚ್ಎಎಲ್ ವಾರ್ಡ್ ಬಿಬಿಎಂಪಿ ಸದಸ್ಯ ಮಂಜುನಾಥ್, ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ಕಸ ಎಸೆಯುವ ಸಾರ್ವಜನಿಕರ ಬಗ್ಗೆ ನಿಗ ಇಡಲು ಆಗಸ್ಟ್ ವೇಳೆಗೆ ಪ್ರತಿ ವಾರ್ಡಗೊಬ್ಬರು ಮಾರ್ಷಲ್ ನೇಮಕ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ವಿಭೂತಿಪುರ ಕೆರೆ ನೀರನ್ನು ನಿರ್ವಹಣೆ ಮಾಡಲು ಎಸ್ಟಿಪಿ ನಿರ್ಮಾಣ ಮಾಡಲಾಗುತ್ತದೆ. ಮಕ್ಕಳು ಹಿರಿಯರು ಒತ್ತಡ ಜೀವನದಿಂದ ಉತ್ಸಾಹ ಪಡೆಯಲು ಕೆರೆಯ ಸುತ್ತಲೂ ವಿಹಾರ ಮಾಡಿ ಎಂದು ಸಲಹೆ ನೀಡಿದರು.ವಿಜ್ಞಾನನಗರ ವಾರ್ಡ್ ಬಿಬಿಎಂಪಿ ಸದಸ್ಯ ಎಸ್.ಜಿ.ನಾಗರಾಜ್ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟರು. ಎಚ್ಎಎಲ್ ವಾರ್ಡ್ ಸದಸ್ಯ ಮಂಜುನಾಥ್, ಮುಖಂಡ ಮನೋಜ್ ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos