ವಾಲ್ಮೀಕಿ ಗುರುಪೀಠದಿಂದ ಕಾಲ್ನಡಿಗೆ ಇಂದು ಬೆಂಗಳೂರಿಗೆ ಆಗಮನ

ವಾಲ್ಮೀಕಿ ಗುರುಪೀಠದಿಂದ ಕಾಲ್ನಡಿಗೆ ಇಂದು ಬೆಂಗಳೂರಿಗೆ ಆಗಮನ

ಬೆಂಗಳೂರು, ಜೂ. 24: ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ಸಮುದಾಯದ ಸ್ವಾಮೀಜಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಿಂದ ಕಾಲ್ನಡಿಗೆ ಜಾಥದಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ,  ಬೃಹತ್ ಮೆರವಣಿಗೆ ನಡೆಸಿದರು.  ಪ್ರಮುಖವಾಗಿ ಪರಿಶಿಷ್ಟ ಪಂಗಡಕ್ಕೆ ಈಗಿರುವ 3%ರಷ್ಟಿನ ಮೀಸಲಾತಿಯನ್ನು 7.5ರಷ್ಟು ಏರಿಕೆ ಮಾಡಬೇಕೆಂದು ಆಗ್ರಹಿಸಿ ಪಾದಾಯಾತ್ರೆ ನಡೆಸುತ್ತಿದ್ದಾರೆ, 1956ರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಜಾರಿಗೊಳಿಸಲಾಗಿತ್ತು ಆದರೆ ಈಗಿನ ಜನ ಸಂಖ್ಯೆಯನ್ನು ಆಧರಿಸಿದರೇ ಏನೇನು ಸಾಲದೆಂಬುದು ಸ್ವಾಮೀಜಿಗಳ ಆಗ್ರಹವಾಗಿದೆ. ಇನ್ನೂ ಇದೇ ತಿಂಗಳ 9ರಿಂದ ಹರಿಹರದಿಂದ ಆರಂಬಿಸಿದ ಪಾದಾಯಾತ್ರೆಯು ನಾಳೆ 25ರಂದು ಬೃಹತ್ ಪ್ರತಿಭಟನೆಯೊಂದಿಗೆ ಬೆಂಗಳೂರಿನಲ್ಲಿ  ಮುಕ್ತಯಗೊಳ್ಳಲಿದೆ. ನೂರಾರು ಸಂಖ್ಯೆಯಲ್ಲಿನ ಸ್ವಾಮೀಜಿಗಳ ಅನುಯಾಯಿಗಳು ಹಾಗೂ ವಾಲ್ಮೀಕಿ ಸಮುದಾಯದವರು ಪಾದಾಯಾತ್ರೆಯಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತ ಆಗಮಿಸುತ್ತಿದ್ದಾರೆ. ಸಂಜೆ ವೇಳೆಗೆ ಪ್ರೀಡಂ ಪಾರ್ಕ್ ಬಳಿ ಆಗಮಿಸುವ ಸಾದ್ಯತೆಯಿದೆ. ವಾಲ್ಮೀಕಿಯ ಭಾವಚಿತ್ರವೊತ್ತ ಪಲ್ಲಕ್ಕಿಯೊಂದಿಗೆ ಪಾದಾಯಾತ್ರೆಯಲ್ಲಿ ಮಹಿಳೆಯರು ಸೇರಿದಂತೆ ಪಾಲ್ಗೊಂಡಿದ್ದರು. ಇನ್ನೂ  ಇದೇ ಸಮುದಾಯವನ್ನು ಪ್ರತಿನಿಧಿಸುವ ಖ್ಯಾತ ಚಲನಚಿತ್ರ ನಟ ಸುದೀಪ್ ಸಂಜೆ ಪಾದಾಯಾತ್ರೆ ಪ್ರೀಡಂ ಪಾರ್ಕ್ ಪ್ರವೇಶಿಸುವ ವೇಳೆ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos