ವೈಕುಂಠ ಏಕಾದಶಿ

 ವೈಕುಂಠ ಏಕಾದಶಿ

 

ಬೆಂಗಳೂರು, ಜ. 6 : ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನ ಟಸ್ಟ್‌: ಬೆಳಗ್ಗೆ 6ಕ್ಕೆ ವೈಕುಂಠ ದ್ವಾರ ಪ್ರವೇಶ ಹಾಗೂ ಸ್ವರ್ಣ ಕವಚ ಅಲಂಕಾರ. ಸ್ಥಳ: ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನ ಟ್ರಸ್ಟ್‌ , ವಿಶ್ವೇಶ್ವರಪುರಂ ವೃತ್ತ.

ಶ್ರೀ ಶೇಷಮಹಾಬಲಮುರಿ ಗಣಪತಿ ಸೇವಾ ಸಮಿತಿ ಟ್ರಸ್ಟ್‌: ಬೆಳಗ್ಗೆ 6.30 ರಿಂದ ರಾತ್ರಿ 9ರ ವರೆಗೆ ‘ಅಖಂಡ ಭಜನಾ’ ಹಾಗೂ ಪೂಜಾ ಕೈಂಕರ್ಯಗಳು. ಸ್ಥಳ: ಶ್ರೀ ಶೇಷಮಹಾಬಲಮುರಿ ಗಣಪತಿ ಸೇವಾ ಸಮಿತಿ ಟ್ರಸ್ಟ್‌, ಶಿವ-ಪಾರ್ವತಿ, ವೆಂಕಟೇಶ್ವರ-ಪದ್ಮಾವತಿ, ದತ್ತಾತ್ರೇಯ, ನವಗ್ರಹ ದೇವಸ್ಥಾನ, 6ನೇ ಅಡ್ಡರಸ್ತೆ, 4ನೇ ಮುಖ್ಯ ರಸ್ತೆ, ಹನುಮಂತನಗರ.

ತಿರುಮಲ ತಿರುಪತಿ ದೇವಸ್ಥಾನ: ಬೆಳಗ್ಗೆ 6ಕ್ಕೆ ಬ್ರಹ್ಮಶ್ರೀ ಕಿರಣ್‌ಕುಮಾರ್‌ ಶರ್ಮ ಅವರಿಂದ ‘ವೇದ ಪಾರಾಯಣ’. ಬೆಳಗ್ಗೆ 7ಕ್ಕೆ ವಿದ್ವಾನ್‌ ಬಾಲಾಜಿ, ಗೋಪಿನಾಥ್‌ ಹಾಗೂ ಬಿ. ಯೋಗಮೂರ್ತಿ ಅವರಿಂದ ನಾದಸ್ವರಂ. ಬೆಳಗ್ಗೆ 8ಕ್ಕೆ ವಾಸವಿ ಮಹಿಳಾ ಭಜನಾ ಮಂಡಳಿಯಿಂದ ವಿಷ್ಣುಸಹಸ್ರ ನಾಮ ಪಾರಾಯಣ. ಸ್ಥಳ: ಶ್ರೀ ವೆಂಕಟೇಶ್ವರಸ್ವಾಮಿ ದೇವ ಸ್ಥಾನ, ವೈಯ್ಯಾಲಿಕಾವಲ್‌, 16ನೇ ಅಡ್ಡರಸ್ತೆ, ಮಲ್ಲೇಶ್ವರಂ.

ವೈಕುಂಠ ಏಕಾದಶಿ: ಏಳೇಳು ಜನ್ಮಗಳ ಪಾಪ ಕಳೆದು ಮೋಕ್ಷ ಸಂಪಾದಿಸುವ ದಿನ. ಶ್ರೀ ಶ್ರೀನಿವಾಸ ದೇವಸ್ಥಾನದ ಸೇವಾ ಸಮಿತಿ ಟ್ರಸ್ಟ್‌: ಶ್ರೀನಿವಾಸ ಸ್ವಾಮಿ ಹಾಗೂ ಅಮ್ಮನವರಿಗೆ ಚಿನ್ನದ ಕಿರೀಟ, ವಜ್ರ ಕವಚ ಧಾರಣೆ ಮತ್ತು ನಾನಾ ಹೂವಿನ ವಿಶೇಷ ಅಲಂಕಾರ. ದೇವಸ್ಥಾನ, ಮರಿ ತಿರುಪತಿ, ಮಹಾಲಕ್ಷ್ಮೀಪುರ.

ಶ್ರೀ ಪೂರ್ಣಪ್ರಜ್ಞ ಮತ್ತು ಶ್ರೀ ರಾಘವೇಂದ್ರಸ್ವಾಮಿ ರಿಲಿಜಿಯಸ್‌ ಚಾರಿಟಬಲ್‌ ಟ್ರಸ್ಟ್‌: ಬೆಳಗ್ಗೆ 4.30ಕ್ಕೆ ಸುಪ್ರಭಾತ ಸೇವೆ, ಕ್ಷೀರಾಭಿಷೇಕ ಹಾಗೂ ಅಲಂಕಾರ. 7 ಕ್ಕೆ ಪೂರ್ಣಪ್ರಜ್ಞಾ ಭಜನಾ ಮಂಡಳಿ ತಂಡದಿಂದ ದೇವರನಾಮ. 8ಕ್ಕೆ ಶ್ರೀ ರಘುವರೇಂದ್ರ ತೀರ್ಥ ಅವರಿಂದ ‘ವೈಕುಂಠ ವರ್ಣನೆ’ ಕುರಿತು ಪ್ರವಚನ. 9ಕ್ಕೆ ಶ್ರೀ ಅಂಬರೀಷಾಚಾರ‍್ಯ ಅವರಿಂದ ‘ವಿಷ್ಣುಸಹಸ್ರ ನಾಮದಲ್ಲಿಶ್ರೀನಿವಾಸ ಕಲ್ಯಾಣದ ಚಿಂತನೆ’ ಕುರಿತು ಪ್ರವಚನ. ಮಧ್ಯಾಹ್ನ 12ಕ್ಕೆ ನಾನಾ ಭಜನಾ ಮಂಡಳಿಯಿಂದ ‘ದೇವರ ನಾಮಗಳು’. ಸಂಜೆ 4ಕ್ಕೆ ಶ್ರೀ ರಾಮವಿಠಲಾಚಾರ‍್ಯ ಅವರಿಂದ ‘ಭಾಗವತ ಸಪ್ತಮ ಸ್ಕಂದ’ ಪ್ರವಚನ.

ಸ್ಥಳ: ಶ್ರೀ ಪೂರ್ಣಪ್ರಜ್ಞ ಮತ್ತು ಶ್ರೀ ರಾಘವೇಂದ್ರಸ್ವಾಮಿ ರಿಲಿಜಿಯಸ್‌ ಚಾರಿಟಬಲ್‌ ಟ್ರಸ್ಟ್‌, ಶ್ರೀ ರಾಘವೇಂದ್ರಸ್ವಾಮಿ ಮಠದ ರಸ್ತೆ, ಬಿಇಎಂಎಲ್‌ ಲೇಔಟ್‌ 3ನೇ ಹಂತ, ರಾಜರಾಜೇಶ್ವರಿನಗರ.

ಫ್ರೆಶ್ ನ್ಯೂಸ್

Latest Posts

Featured Videos