ವೈದ್ಯರ ನಿರ್ಲಕ್ಷ್ಯಣೆ: 2 ಶಿಶುಗಳು ಸಾವು

ವೈದ್ಯರ ನಿರ್ಲಕ್ಷ್ಯಣೆ: 2 ಶಿಶುಗಳು ಸಾವು

ಹೈದರಾಬಾದ್, ಮಾ.8, ನ್ಯೂಸ್ ಎಕ್ಸ್ ಪ್ರೆಸ್: ಒಂದುವರೆ ತಿಂಗಳ ಮಕ್ಕಳಿಗೆ ನೀಡಿದ ಮಾತ್ರೆಗಳು ಬದಲಾದ ಪರಿಣಾಮ 2 ಶಿಶುಗಳು ಸಾವನ್ನಪ್ಪಿದ್ದು, 3 ಶಿಶುಗಳ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ನಂಪಳ್ಳಿಯ ಅರ್ಬನ್ ಹೆಲ್ತ್ ಸೆಂಟರ್ ನಲ್ಲಿ 92 ಶಿಶುಗಳಿಗೆ ಜ್ವರ ನಿವಾರಣೆಗಾಗಿ ನೀಡಲಾಗುವ ಪ್ಯಾರಸಿಟಮಲ್ ಬದಲು ವಯಸ್ಕರಿಗೆ ನೋವು ನಿವಾರಕವಾಗಿ ನೀಡಲಾಗುವ ಟ್ರೆಮೆಡಾಲ್ ಔಷಧವನ್ನು ನೀಡಿದ ಪರಿಣಾಮ 2 ಶಿಶುಗಳು ಸಾವಿಗೀಡಾಗಿವೆ. 30ಕ್ಕೂ ಅಧಿಕ ಶಿಶುಗಳನ್ನು ಇಲ್ಲಿನ ನಿಲೋಫರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

3 ಶಿಶುಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಈ ವೈದ್ಯಕೀಯ ನಿರ್ಲಕ್ಷ್ಯದ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಲು ಸರಕಾರ ತನಿಖಾ ಸಮಿತಿಯೊಂದನ್ನು ರಚಿಸಿದೆ. ಪ್ಯಾರಸಿಟಮಾಲ್ ಮತ್ತು ಟ್ರೆಮೆಡಾಲ್ ಔಷಧಿಗಳ ಪ್ಯಾಕೇಜಿಂಗ್‍ ಮಾತ್ರೆ ಒಂದೇ ರೀತಿ ಇದ್ದುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

“ಟ್ರೆಮೆಡಾಲ್ ಪರಿಣಾಮ 48 ಗಂಟೆಗಳ ಕಾಲ ಇರುತ್ತದೆ. ಒಂದೂವರೆ ತಿಂಗಳ ಪ್ರಾಯದ ಒಂದು ಶಿಶುವನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತಂದಾಗಲೇ ಮೃತಪಟ್ಟಿತ್ತು. ಪೋಸ್ಟ್ ಮಾರ್ಟಂಗೆ ಹೆತ್ತವರಿಗೆ ಮನಸ್ಸು ಮಾಡದೇ ಇದ್ದುದರಿಂದ ಮೃತದೇಹವನ್ನು ದಫನ್‍ ಮಾಡಲಾಗಿದೆ. ಅದನ್ನು ಮತ್ತೆ ಹೊರತೆಗೆದು ಪರೀಕ್ಷಿಸಲಾಗುವುದು,” ಎಂದು ನಿಲೋಫರ್ ಆಸ್ಪತ್ರೆಯ ಸುಪರಿಂಟೆಂಡೆಂಟ್ ಡಾ.ಮುರಳೀಕೃಷ್ಣ ಹೇಳಿದ್ದಾರೆ.

ಸದ್ಯ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಶುಗಳ ಸ್ಥಿತಿ ಸ್ಥಿರವಾಗಿದೆ ಎಂದು ಡಾ.ಮುರಳೀಕೃಷ್ಣ  ಅವರು ಹೇಳಿದ್ದು, ಔಷಧಿಯ ಪರಿಣಾಮದಿಂದ ಶಿಶುಗಳು ಹೊರಬರಲು 72 ಗಂಟೆಗಳು ತಗಲಬಹುದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos