ವೈದ್ಯರ ಎಡವಟ್ಟಿಗೆ ಬಡವರೇ ಬಲಿಪಶು!

ವೈದ್ಯರ ಎಡವಟ್ಟಿಗೆ ಬಡವರೇ ಬಲಿಪಶು!

ಬೆಂಗಳೂರು, ಮೇ.7, ನ್ಯೂಸ್ ಎಕ್ಸ್ ಪ್ರೆಸ್: ಅನಾರೋಗ್ಯಕ್ಕೀಡಾದವರಿಗೆ ಸರ್ಕಾರದ ಯೋಜನೆಯಡಿ ಚಿಕಿತ್ಸೆ ಸಿಗತ್ತೆ ಅನ್ನೋ ಕಾರಣಕ್ಕೆ ಬಡವರು, ಮಧ್ಯಮವರ್ಗದವರು ನಂಬಿಕೆಯಿಂದ ಚಿಕಿತ್ಸೆ ಪಡೆಯಲು ಬರ್ತಾರೆ. ಆದ್ರೆ ಈ ವೈದ್ಯರು ಮಾಡೋ ಎಡವಟ್ಟಿಗೆ ಫ್ರೀಯಾಗಿ ಚಿಕಿತ್ಸೆನೂ ಬೇಡ, ಈ ಎಡವಟ್ಟು ವೈದ್ಯರ ಸಹವಾಸಾನೂ ಬೇಡ ಅನ್ನೋ ಹಾಗಾಗಿಗೆ. ಬೆಂಗಳೂರಿನಲ್ಲಿ ಹೀಗೆ ಒಂದು ಪ್ರಕರಣ ನಡೆದಿದ್ದು, ಯೂರಿನ್ ಇನ್‌ಫೆಕ್ಷನ್ ಅಂತಾ ಹೋದ ವ್ಯಕ್ತಿಗೆ ಚಿಕಿತ್ಸೆ ಕೊಡುವ ಸಂದರ್ಭದಲ್ಲಿ ಆತ ಕೋಮಾಗೆ ಹೋದ ಘಟನೆ ನಡೆದಿದೆ. ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಎನ್‌ಯು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು,ಕೃಷ್ಣಮೂರ್ತಿ ಎಂಬುವವರು ಯೂರಿನ್ ಇನ್‌ಫೆಕ್ಷನ್‌ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲು ಮಾರ್ಚ್‌11ರಂದು ಎನ್‌ಯು ಆಸ್ಪತ್ರೆಗೆ ದಾಖಲಾಗಿದ್ದರು. ಮಾರ್ಚ್‌12ರಂದು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ವ್ಯಕ್ತಿಗೆ ತಪ್ಪು ತಪ್ಪಾಗಿ ಚಿಕಿತ್ಸೆ ನೀಡಿ ಕೋಮಾಗೆ ಹೋಗುವಂತೆ ಮಾಡಿದ್ದಾರೆ. ಆಪರೇಷನ್ ಮಾಡುವ ವೇಳೆ ಕೃಷ್ಣಮೂರ್ತಿ ಉಸಿರಾಟದ ತೊಂದರೆಯಿಂದ ಬಳಲಿದ್ದಾರೆ. ಈ ವೇಳೆ ಬಾಯಿಯಿಂದ ಆಕ್ಸಿಜನ್ ಪೂರೈಕೆಯಾಗದ ಹಿನ್ನೆಲೆ ಗಂಟಲು ಮೂಲಕ ಆಕ್ಸಿಜನ್ ಪೂರೈಕೆಗೆ ವೈದ್ಯರು ಸಿದ್ಧತೆ ನಡೆಸಿದ್ದು, ಹೀಗೆ ಮಾಡುವ ವೇಳೆ, ಬ್ರೈನ್ ಇಂಜ್ಯೂರಿಯಾಗಿ ಕೃಷ್ಣಮೂರ್ತಿ ಕೋಮಾಗೆ ಹೋಗಿದ್ದಾರೆ. ಆದರೆ ಎಡವಟ್ಟು ಮಾಡಿದ ವೈದ್ಯರು ಮಾತ್ರ, ತಮ್ಮ ತಪ್ಪನ್ನು ಒಪ್ಪಿಕೊಳ್ಳದೇ, ಕೆಲವೊಮ್ಮೆ ಹೀಗಾಗುತ್ತೆ ಅಂತಾ ಕಾರಣ ಹೇಳಿದ್ದಾರೆ. ಅಲ್ಲದೇ ಕೋಮಾಗೆ ಹೋದ ಕೃಷ್ಣಮೂರ್ತಿಗೆ ಒಂದು ವಾರ ಟ್ರೀಟ್‌ಮೆಂಟ್ ಕೊಟ್ಟಿದ್ದು, ನಂತರ ಡಿಸ್ಚಾರ್ಜ್ ಮಾಡಿಕೊಂಡು ಹೋಗುವಂತೆ ಒತ್ತಡ ಹೇರಿದ್ದಾರೆ. ಇನ್ನು ವೈದ್ಯರಷ್ಟೇ ಅಲ್ಲದೇ, ಬನಶಂಕರಿ ಪೊಲೀಸರು ಕೂಡ ಕೃಷ್ಟಮೂರ್ತಿಯನ್ನ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದ್ದಾರೆ. ಪೊಲೀಸರ ಎಂಟ್ರಿಯಿಂದ ಭಯಪಟ್ಟ ಕುಟುಂಬಸ್ಥರು ಕೃಷ್ಣಮೂರ್ತಿಯನ್ನು ಮನೆಗೆ ಕರೆದೊಯ್ದಿದ್ದು, ಸದ್ಯ ರಾಜಾಜಿನಗರ ಖಾಸಗಿ ಆಸ್ಪತ್ರೆಯಲ್ಲಿ ಕೃಷ್ಣಮೂರ್ತಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಕೃಷ್ಣ ಮೂರ್ತಿ ತಂದೆ- ತಾಯಿಗೆ ವಯಸ್ಸಾಗಿದೆ. ಅಲ್ಲದೇ, ನಾಲ್ಕು ವರ್ಷದ ಮಗುವೂ ಇದೆ. ಇಂತಹ ಸ್ಥಿತಿಯಲ್ಲಿ ಈ ರೀತಿಯಾಗಿದ್ದು, ಕೃಷ್ಣಮೂರ್ತಿ ಪತ್ನಿಗೆ ದಿಕ್ಕು ತೋಚದಂತಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos