ಟೆಂಪೋಗೆ ಟ್ರಕ್‌ ಡಿಕ್ಕಿ, ತಂದೆ, ಮಗ ಸಾವು!

ಟೆಂಪೋಗೆ ಟ್ರಕ್‌  ಡಿಕ್ಕಿ, ತಂದೆ, ಮಗ ಸಾವು!

 ಉತ್ತರ ಪ್ರದೇಶ, ಮೇ. 25, ನ್ಯೂಸ್ಎಕ್ಸ್ ಪ್ರೆಸ್:  ಗಾಧಿಯಾ ರೈಲ್ವೇ ಕ್ರಾಸಿಂಗ್‌ ಸಮೀಪ ಟ್ರಕ್‌ ಒಂದು ಟೆಂಪೋಗೆ ಢಿಕ್ಕಿ ಹೊಡೆದ ಪರಿಣಾಮ  ಒಂದೇ ಕುಟುಂಬ ಇಬ್ಬರು ಸಾವಿಗೀಡಾಗಿದ್ದಾರೆ. ಪ್ರದೀಪ್‌ ರಾಜಭರ್‌ (30) ಮಗ ರೋಶನ್‌ (5) ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದರು. ಆಗ ಟ್ರಕ್‌ ಢಿಕ್ಕಿ ಹೊಡೆದ ಪರಿಣಾಮ ಮಗ ರೋಶನ್‌ ಸ್ಥಳದಲ್ಲೇ ಮೃತಪಟ್ಟರೆ ತಂದೆ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಎರಡೂ ವಾಹನಗಳ ಚಾಲಕರು ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos