ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು 

ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು 

ಬೆಂಗಳೂರು, ಜೂ.24: ಆನೇಕಲ್,  ಸಂಘ ಸಂಸ್ಥೆಗಳು ಸಮಾಜದ ಕನ್ನಡಿಯಾಗಿ ಕೆಲಸ ಮಾಡಬೇಕು, ಡಾ ಬಿ.ಆರ್. ಅಂಬೇಡ್ಕರ್‍ ರವರ ತತ್ವ ಸಿದ್ದಾಂತಗಳು ಯುವಶಕ್ತಿಗೆ ಅವಶ್ಯಕವಾಗಿದೆ ಎಂದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಹೇಳಿದರು. ಅವರು ಬನ್ನೇರುಘಟ್ಟ ರಸ್ತೆಯ ಗೊಟ್ಟಿಗರೆ ಬಳಿಯ ಆರ್.ಬಿ.ಐ ಲೇಔಟ್‍ನ ಕ್ಯಾಪಿಟಲ್ ಕ್ರೀಡಾಂಗಣದಲ್ಲಿ ಜೈಬೀಮ್ ಸೇನೆಯ ಸರ್ವಾಶ್ರಮ ಸೇವಾ ಟ್ರಸ್ಟ್ ಸಹಯೋಗದಲ್ಲಿ ಸಂಘಟನೆ ಹಮ್ಮಿಕೊಂಡಿದ್ದ ಬುದ್ದ, ಬಸವ, ಅಂಬೇಡ್ಕರ್ ಜಯಂತಿಯಲ್ಲಿ ಬಾಗವಹಿಸಿ ಅವರು ಮಾತನಾಡಿದರು, ಭಾರತೀಯ ಜಾತಿ, ಪಂಥ ಮತ್ತು ಧರ್ಮಕ್ಕಿಂತಲೂ ದೇಶ ದೊಡ್ಡದು ತಿಳಿದುಕೊಂಡಾಗ ಸಮ ಸಮಾಜ ನಿರ್ಮಾಣ ಸಾದ್ಯ,. ನಾನು ಎನ್ನುವ ಬದಲು, ನಾವೆಲ್ಲರೂ ಎನ್ನುವ ಶಬ್ದಕ್ಕೆ ಇರುವ ಶಕ್ತಿ ಮೇಲಾದುದು, ಈ ನಿಟ್ಟಿನಲ್ಲಿ ಎಲ್ಲಾ ವರ್ಗದವರು ಶಿಕ್ಷಿತರಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು  ಎಂದರು.

ಹೈಕೋರ್ಟ್ ವಕೀಲ ಹಾಗೂ ವಿದ್ಯಾರ್ಥಿ ಬಂದುತ್ವದ ವೇದಿಕೆಯ ಮಾರ್ಗದರ್ಶಕ ಅನಂತ ನಾಯಕ್ ಮಾತನಾಡಿ, ಜಾತಿ, ಪಂಥ ಮತ್ತು ಧರ್ಮಕ್ಕಿಂತಲೂ ದೇಶ ದೊಡ್ಡದು ಎನ್ನುವ ಸಂದೇಶವನ್ನು ಸಾರಿದವರು ಅಂಬೇಡ್ಕರ್‍ರವರು, ಮಾನವೀಯತೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಹೋರಾಟ ಮತ್ತು ತ್ಯಾಗಗಳ ಮೂಲಕ ಭವ್ಯ ಭಾರತ ನಿರ್ಮಣಕ್ಕೆ ನಾವೆಲ್ಲರೂ ಮುಂದಾಗಬೇಕು. ಜೈಬೀಮ್ ಸೇನೆ ಧರ್ಮಾತೀತವಾಗಿ ಎಲ್ಲಾ ದರ್ಮದ ದುಡಿಯುವ ಕೈಗಳಿಗೆ ಕೆಲಸವನ್ನು ಕೊಡಬೇಕು, ಬಡವರ ಹಕ್ಕುಗಳಿಗೆ ಹೋರಾಟದ ಮೂಲಕ ಅವರ ಮೂಲಭೂತ ಸೌಲಭ್ಯಗಳನ್ನು ಕೊಡಿಸುವ ಸಲುವಾಗಿ ರಾಜ್ಯಾದ್ಯಂತ ಸಂಘಟನೆ ಕೆಲಸ ಮಾಡುತ್ತಿದೆ ಎಂದರು.

ಸಂಘಟನೆಯ ಸಂಸ್ಥಾಪಕ ರಾಜ್ಯಾದ್ಯಕ್ಷ ಎನ್.ಅನಂತ ಮಾತನಾಡಿ, ದೇಶದಲ್ಲಿ ಎಲ್ಲಾ ವರ್ಗದವರಿಗೆ ಸಮಾನ ಶಿಕ್ಷಣ ಸಿಗಬೇಕು, ಹಿರಿಯರು ಹಾಕಿಕೊಟ್ಟ ಸಂವಿಧಾನದಡಿಯಲ್ಲಿ ನಾವು ಬದುಕಬೇಕಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ ಕೆಲಸ ಮಡಬೇಕು ಎಂದರು. ನೂರಕ್ಕೂ ಹೆಚ್ಚು ಆಟೋಗಳಲ್ಲಿ ಅಂಬೇಡ್ಕರ್ ಭಾವಚಿತ್ರಗಳನ್ನ ಮೆರವಣಿಗೆ ಮಾಡುವ ಜೊತೆಗೆ ವಿವಿದ ಸಾಂಸ್ಕ್ರತಿಕ ಕಲಾ ತಂಡಗಳ ಮೆರವಣಿಗೆಗೆ ಇನ್ನಷ್ಟು ಮೆರುಗು ನೀಡಿದವು

ಕಾರ್ಯಕ್ರಮದಲ್ಲಿ ತುಮಕೂರಿನ ಚೆನ್ನೇನಹಳ್ಳಿ ಛಲವಾದಿ ಗುರುಪೀಠದ ಪೀಠಾದ್ಯಕ್ಷರಾದ ಪರಮಪೂಜ್ಯ ಬಸವಲಿಂಗ ಮೂರ್ತಿ ಶರಣರು, ಸರ್ವಾಶ್ರಯ ಸೇವಾ ಟ್ರಸ್ಟ್ ಅದ್ಯಕ್ಷ ಹೆಚ್. ನಂಜಪ್ಪ, ಸಂಘಟನೆಯ ಪಧಾದಿಕಾರಿಗಳಾದ ರವೀಶ್, ಭಾಗ್ಯಲಕ್ಷ್ಮಿ, ಪಿವಿಸಿ ಸಂಘಟನೆಯ ಮುಖಂಡ ಭವಾನಿ ಪ್ರಸಾದ್ ಮತ್ತಿತರರು

ಫ್ರೆಶ್ ನ್ಯೂಸ್

Latest Posts

Featured Videos