ಉತ್ತಮ ಆದಾಯಗಳಿಸಿದ ರೈತನಿಂದ ಶಾಲಾ ಮಕ್ಕಳಿಗೆ ಬ್ಯಾಗ್ ಕಾಣಿಕೆ

ಉತ್ತಮ ಆದಾಯಗಳಿಸಿದ ರೈತನಿಂದ ಶಾಲಾ ಮಕ್ಕಳಿಗೆ ಬ್ಯಾಗ್ ಕಾಣಿಕೆ

ಅದೇಷ್ಟೋ ಜನ ಕೃಷಿ ಮಾಡೋ ರೈತರು ದುಡ್ಡು ಬಂದ್ರೆ ಸಾಕು ತಮ್ಮ ಸಾಲ ತೀರಿಸಿಕೊಂಡು ಎಲ್ಲರಂತೆ ಒಳ್ಳೆಯ ಜೀವನ ಕಟ್ಟಿಕೊಳ‍್ಳೋದನ್ನ ನೋಡ್ತಾರೇ… ಜತೆಗೆ ಸದ್ಯ ಒಳ್ಳೆ ಬೆಳೆ ಬಂದ್ರೆ ಸಾಕಪ್ಪ ನಮ್ಮ ಮನೆ ನಾವು ನೋಡಿಕೊಂಡ್ರೆ ಸಾಕು ಅಂತೀರ್ತಾರೆ. ಆದ್ರೆ ಇಲ್ಲೊಬ್ಬ ರೈತ ತಾನು ಬೆಳೆದಿದ್ದ ದ್ರಾಕ್ಷಿ ಬೆಳೆಯಲ್ಲಿ ನೀರಿಕ್ಷೆಗೂ ಮಿರಿ ಫಸಲು ಬಂದು ಲಕ್ಷಾಂತರ ಆದಾಯವಾಗಿದೆ. ಇನ್ನೂ ಒಳ್ಳೆಯ ಆದಾಯಗಳಿಸಿದ್ದ ಆ ರೈತ ತನಗೆ ಬಂದಿದ್ದ ಬೆಳೆಯ ಹಣದಲ್ಲಿ ಸಮಾಜ ಮೆಚ್ಚುವಂತಹ ಕೆಲಸ ಮಾಡಿದ್ದಾನೆ.

ಉತ್ತಮ ಆದಾಯಗಳಿಸಿ ಶಾಲೆಯಲ್ಲಿ ಮಕ್ಕಳಿಗೆ ಬ್ಯಾಗ್‌ಗಳನ್ನ ವಿತರಿಸುತ್ತಿರೋ ರೈತ. ರೈತನ ಈ ಸೇವೆ ಕಂಡು ಪ್ರಶಂಸೆ ವ್ಯಕ್ತಪಡಿಸ್ತಿರೋ ಗ್ರಾಮಸ್ಥರು ಹಾಗೂ ಶೀಕ್ಷಕರು. ಈ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ. ಅಂದಹಾಗೆ ಗ್ರಾಮದ ಶಶಿಕುಮಾರ್ ಎಂಬುವವರು ಸುಮಾರು ಎರಡುವರೆ ಎಕರೆ ಜಮೀನಿನಲ್ಲಿ ದ್ರಾಕ್ಷಿಯನ್ನ ಬೆಳೆದಿದ್ದರು. ಪ್ರತಿವರ್ಷ ದ್ರಾಕ್ಷಿಯಲ್ಲಿ ಅಷ್ಟೇನು ಲಾಭ ಪಡೆಯದ ಶಶಿಕುಮಾರ್‌ಗೆ ಈ ವರ್ಷ ಒಳ್ಳೆಯ ಫಸಲು ಬಂದಿದ್ದು, ಎರಡುವರೆ ಎಕರೆಗೆ 42 ಟನ್ ದ್ರಾಕ್ಷಿ ಬೆಳೆದಿದ್ದಾರೆ. ಇನ್ನೂ ಉತ್ತಮ ಫಸಲಿನಿಂದ ನೀರಿಕ್ಷೆ ಮಿರಿದಷ್ಟು ಆದಾಯ ಬಂದಿದ್ದು, ರೈತನ ಸಂತಸ ಹಿಮ್ಮಡಿಗೊಳಿಸಿದೆ. ಈ ನಿಟ್ಟಿನಲ್ಲಿ ಗ್ರಾಮದ ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳಿಗೆ ಖಾಸಗಿ ಶಾಲೆಗಳಂತೆ ಯಾವುದೇ ಕೊರತೆಯಿರಬಾರದೆಂದು ಮಕ್ಕಳಿಗೆಲ್ಲಾ ತನ್ನ ಆದಾಯದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬ್ಯಾಗ್‌ಗಳನ್ನ ಕಾಣಿಕೆಯಾಗಿ ನೀಡಿದ್ದಾರೆ. ಅಲ್ಲದೆ ಶಾಲೆಯ ಫಲಹಾರದ ಪಾತ್ರೆಗಳನ್ನ ಕೊಡಿಸುವ ಮುಖಾಂತರ ಬೆಳೆಯ ಆದಾಯವನ್ನ ಸಮಾಜೀಕ ಕೆಲಸಕ್ಕೆ ದಾನವಾಗಿ ನೀಡಿ ಗ್ರಾಮಸ್ಥರು ಹಾಗೂ ಮಕ್ಕಳ ಮೆಚ್ಚುಗೆಗೆ ಈ ರೈತ ಪಾತ್ರವಾಗಿದ್ದಾನೆ.

ಅಂದಹಾಗೆ ಈ ಹಿಂದೆ ಗ್ರಾಮದ ಶಾಲೆಯಲ್ಲಿ ಓದಿದ್ದ ಈ ರೈತ ಕೆಲವು ಶಾಲಾ ಕಾರ್ಯಕ್ರಮಕ್ಕೆ ಹಾಜರಾಗ್ತಿದ್ರಂತೆ. ಈ ವೇಳೆ ರಿಯಲ್ ಎಸ್ಟೆಟ್ ಸೇರಿದಂತೆ ಬಿಲ್ಡರ್‌ಗಳು ಆಗಮಿಸಿ ಶಾಲಾ ಮಕ್ಕಳಿಗೆ ಬುಕ್ ವಿತರಿಸುವ ಕಾರ್ಯಕ್ರಮ ನೋಡಿದ್ದ ರೈತ ತಮಗೆ ಇಂತಹ ಅವಕಾಶ ಬರೋದು ಯಾವಾಗ ಅಂದುಕೊಂಡಿದ್ದನಂತೆ. ಹೀಗಾಗಿ ತನ್ನ ಬೆಳೆಯಲ್ಲಿ ಲಕ್ಷಾಂತರ ಆದಾಯ ಬಂದಿದ್ದ ರೈತ ಇದೀಗ ತಮ್ಮ ಊರಿನ ಎರಡು ಶಾಲೆಯ ಎಲ್ಲಾ ಮಕ್ಕಳಿಗೆ ಬ್ಯಾಗ್‌ಗಳನ್ನ ಕಾಣಿಕೆಯಾಗಿ ನೀಡುವ ಮುಖಾಂತರ ರೈತರಲ್ಲೂ ಕೂಡ ಸಮಾಜೀಕ ಬದ್ದತೆಯಿದೆ ಅನ್ನೋದನ್ನ ತೋಡಿಸಿಕೊಟ್ಟಿದ್ದಾನೆ.

ಇನ್ನೂ ರೈತ ಶಶಿಕುಮಾರ್‌ರ ಸಾಮಾಜೀಕ ಸೇವೆಯನ್ನ ಗ್ರಾಮಸ್ಥರು ಕೊಂಡಾಡಿದ್ದಾರೆ. ರೈತರು ಬೆಳೆಗಳನ್ನ ಶ್ರದ್ದೇಯಿಂದ ಮಾಡುವ ಮುಖಾಂತರ ಒಳ್ಳೆಯ ಬೆಳೆ ಬೆಳೆದು ಆದಾಯಗಳಿಸಿದ್ರೆ ಎಲ್ಲೆಡೆ ಈ ರೀತಿಯಾಗಿ ರೈತರು ಸೇವೆ ಮಾಡಬಹುದು ಎಂದಿದ್ದಾರೆ. ಜತೆಗೆ ಆಯಾ ಗ್ರಾಮಗಳಲ್ಲಿ ಸರ್ಕಾರಕ್ಕೆ ಕಾಯದೇ ಈ ರೀತಿ ರೈತರು ತಮ್ಮ ಕೈಲಾದ ಸೇವೆಯನ್ನ ಸಲ್ಲಿಸಿದ್ರೆ ಸರ್ಕಾರಿ ಶಾಲೆಗಳು ಕೂಡ ಉತ್ತಮ ಮಟ್ಟದಲ್ಲಿರುತ್ತವೆ ಅನ್ನೋದು ಗ್ರಾಮಸ್ಥರ ಅಭಿಮತವಾಗಿದೆ.

ಒಟ್ಟಾರೇ ಅಕ್ರಮವಾಗಿ ಹಣ ಮಾಡಿರೋ ಕೆಲ ರಾಜಕಾರಣಿಗಳು, ಶಾಲೆಗಳಿಗೆ ಸೇರಿದಂತೆ ವಿವಿಧಕಡೆ ತಮ್ಮ ಪಾಪಗಳನ್ನ ತೊಳೆದುಕೊಳ್ಳಲು ಬುಕ್ಸ್, ಬ್ಯಾಗ್‌ಗಳನ್ನ ವಿತರಿಸೋದು ನೋಡಿದ್ದೇವೆ. ಆದ್ರೆ ಇಂದು ಒಬ್ಬ ರೈತ ತನ್ನ ಉತ್ತಮ ಆದಾಯದಲ್ಲಿ ಮಕ್ಕಳಿಗೆ ಬ್ಯಾಗ್‌ಗಳನ್ನ ದಾನ ಕೊಡೋ ಮುಖಾಂತರ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳ ರೀತಿಯಲ್ಲಿ ಸೆಡ್ಡು ಹೊಡೆಯಲಿ ಅಂತಾ ಹೃದಯ ವೈಶಾಲ್ಯತೆ ಮೆರೆದಿರೋದು ನಿಜಕ್ಕೂ ಶ್ಲಾಘನೀಯ.

 

ಫ್ರೆಶ್ ನ್ಯೂಸ್

Latest Posts

Featured Videos