‘ಊರ್ವಶಿ’ ಹಾಡಿಗೆ ಸಖತ್ ಸ್ಟೆಪ್ಸ್

‘ಊರ್ವಶಿ’ ಹಾಡಿಗೆ  ಸಖತ್ ಸ್ಟೆಪ್ಸ್

ಮುಂಬೈ ,ಜು. 10 : ಸಲ್ಮಾನ್ ಖಾನ್, ಸುದೀಪ್ ಹಾಗೂ ನಿರ್ಮಾಪಕ ಸಾಜಿದ್ ನದಿಯಾವಾಲಾ ನಿರ್ದೇಶಕ ಪ್ರಭುದೇವ ಜೊತೆ ಸೂಪರ್ ಹಿಟ್ ‘ಊರ್ವಶಿ’ ಹಾಡಿಗೆ ಡ್ಯಾನ್ಸ್ ಕಲಿತಿದ್ದಾರೆ. ಸ್ಯಾಂಡಲ್ವುಡ್ ಕಿಚ್ಚ ಸುದೀಪ್ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಹಾಗೂ ಬಾಲಿವುಡ್ ಸಲ್ಮಾನ್ ಖಾನ್ ಜೊತೆ ಡ್ಯಾನ್ಸ್ ಮಾಡಿದ್ದಾರೆ. ವಿಡಿಯೋ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಲ್ಮಾನ್ ಹಾಗೂ ಸುದೀಪ್, ಪ್ರಭುದೇವ ನಿರ್ದೇಶನದ ‘ದಬಾಂಗ್-3’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸುದೀಪ್ ದಬಾಂಗ್ 3 ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಲಿದ್ದು, ಈ ಪಾತ್ರ ಹೀರೋ ಪಾತ್ರಕ್ಕೆ ಇರುವಷ್ಟೇ ಸಮಾನ ಪ್ರಾಮುಖ್ಯತೆಯನ್ನು ಹೊಂದಿದೆ. ಚಿತ್ರದಲ್ಲಿ ಗೂಂಡಾ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಲ್ಮಾನ್ ಖಾನ್ ಮತ್ತು ಅರ್ಬಾಜ್ ಖಾನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos