ಯುಪಿ ವಾರಿಯರ್ಸ್ ಹಾಗೂ ಆರ್‌ಸಿಬಿ ಮುಖಾಮುಖಿ

ಯುಪಿ ವಾರಿಯರ್ಸ್ ಹಾಗೂ ಆರ್‌ಸಿಬಿ ಮುಖಾಮುಖಿ

ಬೆಂಗಳೂರು: ವುಮೆನ್ ಪ್ರೀಮಿಯರ್ ಲೀಗ್ ನ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದು ಇನ್ನೆರಡು ಪಂದ್ಯಗಳನ್ನು ಸೋತಿದ್ದು ಇಂದು ಬೆಂಗಳೂರು ಬುಲ್ಸ್ 5ನೇ ಪಂದ್ಯವಾಡಲಿದ್ದು. ಈ ಪಂದ್ಯದಲಾದರೂ ಗೆದ್ದು ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಲಿದ್ದಿಯಾ ಎಂದು ಅಭಿಮಾನಿಗಳು ಕಾದು ನೋಡಲಿದ್ದಾರೆ.

ವುಮೆನ್ಸ್​ ಪ್ರೀಮಿಯರ್ ಲೀಗ್​ನ 11ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಗೆಲುವಿನ ಲಯಕ್ಕೆ ಮರಳಬೇಕಾದ ಅನಿವಾರ್ಯತೆ ಆರ್​ಸಿಬಿ ತಂಡದ ಮುಂದಿದೆ. ಏಕೆಂದರೆ ಕಳೆದ ಎರಡು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲನುಭವಿಸಿದೆ.

ವಿಶೇಷ ಎಂದರೆ ಇದು ಬೆಂಗಳೂರಿನಲ್ಲಿ ನಡೆಯಲಿರುವ ಕೊನೆಯ ಪಂದ್ಯ. ಮುಂದಿನ ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ಹೀಗಾಗಿ ತವರಿನ ಅಭಿಮಾನಿಗಳ ಮುಂದೆ ಕೊನೆಯ ಬಾರಿ ಕಣಕ್ಕಿಳಿಯಲು ಆರ್​ಸಿಬಿ ಸಜ್ಜಾಗಿದೆ. ಅತ್ತ ಯುಪಿ ವಾರಿಯರ್ಸ್ ತಂಡವು ಆಡಿರುವ ನಾಲ್ಕು ಪಂದ್ಯಗಳಲ್ಲಿ 2 ಜಯ ಸಾಧಿಸಿದೆ. ಅದರಲ್ಲೂ ಆರ್​ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ಕಠಿಣ ಪೈಪೋಟಿ ನೀಡಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.

ಯುಪಿ ವಾರಿಯರ್ಸ್ ವಿರುದ್ಧದ ಮೊದಲ ಪಂದ್ಯವನ್ನು ಆರ್​ಸಿಬಿ ಕೇವಲ 2 ರನ್​ಗಳಿಂದ ಗೆದ್ದುಕೊಂಡಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ಉಭಯ ತಂಡಗಳಿಂದ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.

 

ಫ್ರೆಶ್ ನ್ಯೂಸ್

Latest Posts

Featured Videos