ಮುಂಬೈ ವಿರುದ್ದ ಯುಪಿ ಗೆ ಭರ್ಜರಿ ಜಯ

ಮುಂಬೈ ವಿರುದ್ದ ಯುಪಿ ಗೆ ಭರ್ಜರಿ ಜಯ

ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಆರನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡ ಹಾಗೂ ಯುಪಿ ವಾರಿಯರ್ಸ್ ಮುಕಾಮುಖಿಯಾಗಿತ್ತು.

ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಯುಪಿ ವಾರಿಯರ್ಸ್ ತಂಡ ಲೀಗ್​ನಲ್ಲಿ ಮೊದಲ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಗೆಲುವಿಗೆ 162 ರನ್​ಗಳ ಸವಾಲನ್ನು ನೀಡಿತು.

ಹಾಗೆ ನೋಡಿದರೆ ಯುಪಿ ತಂಡಕ್ಕೆ ಈ ಸವಾಲು ಬಹಳ ದೊಡ್ಡದಿತ್ತು. ಆದರೆ ಸೊಲ್ಲಾಪುರದ ಕಿರಣ ನವಗಿರೆಯ ಬಿರುಗಾಳಿ ಬ್ಯಾಟಿಂಗ್​ ಮುಂದೆ ಮುಂಬೈ ಬೌಲರ್​ಗಳು ತತ್ತರಿಸಿ ಹೋದರು. ಹೀಗಾಗಿ ಅಬ್ಬರದ ಆರಂಭ ಪಡೆದುಕೊಂಡ ಯುಪಿ ತಂಡ ಅಂತಿಮವಾಗಿ 16.3 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

 

 

ಫ್ರೆಶ್ ನ್ಯೂಸ್

Latest Posts

Featured Videos