ಉಮಾಶ್ರೀಗೆ ಮತ್ತೊಂದು ಪ್ರಶಸ್ತಿ

ಉಮಾಶ್ರೀಗೆ ಮತ್ತೊಂದು ಪ್ರಶಸ್ತಿ

ಬೆಂಗಳೂರು, ಜು. 30 : ಕರ್ನಾಟಕ ನಾಟಕ ಅಕಾಡೆಮಿಯ 2019-20ನೇ ಸಾಲಿನ ಜೀವಮಾನದ ಗೌರವ ಪ್ರಶಸ್ತಿ ಮತ್ತು ಅಕಾಡೆಮಿ ವಾರ್ಷಿಕ ರಂಗ ಪ್ರಶಸ್ತಿ ಪ್ರಕಟಗೊಂಡಿದ್ದು, ಜೀವಮಾನದ ಗೌರವ ಪ್ರಶಸ್ತಿಗೆ ಹಿರಿಯ ರಂಗಭೂಮಿ ಕಲಾವಿದೆ, ಮಾಜಿ ಸಚಿವೆ ಉಮಾಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ. ಒಟ್ಟು 25 ವಾರ್ಷಿಕ ಪ್ರಶಸ್ತಿ ಹಾಗೂ ನಾಲ್ಕು ಅಕಾಡೆಮಿ ದತ್ತಿ ಪ್ರಶಸ್ತಿಗೆ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಜೀವಮಾನ ಸಾಧನೆ ಪ್ರಶಸ್ತಿ 50 ಸಾವಿರ ರು.ನಗದು, ವಾರ್ಷಿಕ ರಂಗ ಪ್ರಶಸ್ತಿಯು 25 ಸಾವಿರ ರು. ನಗದು ಹಾಗೂ ದತ್ತಿ ಪ್ರಶಸ್ತಿಗಳು ತಲಾ 5 ಸಾವಿರ ರು.ನಗದು ಪ್ರಶಸ್ತಿಯನ್ನು ಒಳಗೊಂಡಿವೆ. ಈ ಸಮಾರಂಭವು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್ ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದವರು ಅಕಾಡೆಮಿ ವಾರ್ಷಿಕ ರಂಗ ಪ್ರಶಸ್ತಿಗೆ ಧರ್ಮೇಂದ್ರ ಅರಸು (ಬೆಂಗಳೂರು), ಗಣೇಶ್ ಶೆಣೈ (ಬೆಂಗಳೂರು), ಅಕ್ಕ ಹನುಮಂತಯ್ಯ (ತುಮಕೂರು), ಗ್ಯಾರಂಟಿ ರಾಮಣ್ಣ (ಹಾಸನ), ನಾಗಪ್ಪ ಬಳೆ (ರಾಯಚೂರು), ಪ್ರಭಾಕರ ಕುಲಕರ್ಣಿ (ಬಾಗಲಕೋಟೆ), ಗುರುಬಸಪ್ಪ ಕಲ್ಲಪ್ಪ ಸಜ್ಜನ್ (ವಿಜಯಪುರ), ಗೀತಾ ಸುರತ್ಕಲ್ (ಮಂಗಳೂರು), ಲಕ್ಷ್ಮೀಪತಿ ಕೋಲಾರ (ಕೋಲಾರ), ಸಣ್ಣಪ್ಪ ಕೊಡಗಳ್ಳಿ (ಮಂಡ್ಯ), ರಾಜಶೇಖರ ಶೇಟ್ (ಉಡುಪಿ), ಎಸ್.ತಿಪ್ಪೇಸ್ವಾಮಿ (ಚಳ್ಳಕೆರೆ), ಕೊಟ್ರಪ್ಪ ಚನ್ನಪ್ಪ ಕೊಟ್ರಪ್ಪನವರ್ (ಹಾವೇರಿ), ಬಸವರಾಜ ಬಸವಣ್ಣೆಪ್ಪ ಕಡ್ಲೆಣ್ಣವರ (ಧಾರವಾಡ), ಎನ್.ಮಂಜಮ್ಮ ಗುಬ್ಬಿ (ಗದಗ), ಅರುಣ್ ಸಾಗರ್ (ಬೆಂಗಳೂರು), ಎಚ್.ಎಸ್.ಪ್ರಸನ್ನ (ಸಾಗರ), ಈಶ್ವರಪ್ಪ ಫರಹತಾಬಾದ (ಕಲಬುರಗಿ), ವೆಂಕಟೇಶ್ (ಬೆಂಗಳೂರು), ಉಮೇಶ್ ಎಂ.ಸಾಲಿಯಾನ (ಕಾಸರಗೋಡು), ಕೆ.ಎಂ.ನಾಗರಾಜು (ಹೆಗ್ಗೋಡು), ವೆಂಕಟೇಶಮೂರ್ತಿ (ಚಿಕ್ಕನಾಯಕನಹಳ್ಳಿ), ಜಯಕುಮಾರ್ ಕೊಡಗನೂರು (ದಾವಣಗೆರೆ), ಮಾ.ಬ.ಸೋಮಣ್ಣ (ಬಳ್ಳಾರಿ) ಮತ್ತು ವಿಜಯಕುಮಾರ್ ಜಿತೂರಿ (ಗದಗ) ಅವರನ್ನು ಆಯ್ಕೆ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos