ಬೆಂಗಳೂರಿನಲ್ಲಿ ಉಲ್ಫಾ ಚಟುವಟಿಕೆ ,ಎಚ್ಚರ!

  • In Metro
  • December 8, 2018
  • 288 Views
ಬೆಂಗಳೂರಿನಲ್ಲಿ ಉಲ್ಫಾ ಚಟುವಟಿಕೆ ,ಎಚ್ಚರ!

ಬೆಂಗಳೂರು: ನಗರದ ಸಾಫ್ಟ್ವೇರ್‌ ಕಂಪೆನಿಯೊಂದರ ಟೆಕ್ಕಿ, ಉಲ್ಫಾ ತೀವ್ರವಾದಿ ಸಂಘಟನೆಗೆ ಸೇರಿಕೊಂಡಿದ್ದಾಗಿ ಸ್ವಯಂ ಘೋಷಣೆ ಮಾಡಿಕೊಂಡಿದ್ದ ಅಭಿಜಿತ್‌ ಗೊಗೋಯ್‌ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ. ಆತ ಹಾಗೂ ಆತನ ಸಂಗಡಿಗರ ಹೆಚ್ಚಿನ ಮಾಹಿತಿ ಪಡೆಯಲು ಹಾಗೂ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ವಾಸವಾಗಿರುವ ಈಶಾನ್ಯ ರಾಜ್ಯ ಮೂಲದವರ ಮೇಲೆ ಹದ್ದಿನ ಕಣ್ಣಿಡಲು ಸೂಚನೆ ನೀಡಿದೆ.

ಅಷ್ಟೇ ಅಲ್ಲ, ಗೊಗೋಯ್‌ ಬೆಂಗಳೂರು ನಗರದಲ್ಲಿ ಮೂರು ವರ್ಷ ವಾಸವಿದ್ದ. ಎರಡು ವರ್ಷಗಳ ಹಿಂದೆ ಕಳೆದೆರಡು ವರ್ಷಗಳ ಹಿಂದೆ ಬೆಂಗಳೂರು ತೊರೆದು ಪ್ರತ್ಯೇಕತಾವಾದಿ ಸಂಘಟನೆ ಸದಸ್ಯನಾಗಿದ್ದ. ಆತನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನಗರ ಮತ್ತು ಇತರ ರಾಜ್ಯಗಳಲ್ಲಿ ಆಶ್ರಯ ಪಡೆದುಕೊಂಡಿರುವ ಉಲ್ಫಾ ಮತ್ತಿತರ ಈಶಾನ್ಯರಾಜ್ಯಗಳ ಸಂಘಟನೆಗಳ ಸದಸ್ಯರ ನಿಕಟ ಸಂಪರ್ಕ ಪಡೆದಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಆತ ಕೆಲಸ ಮಾಡುತ್ತಿದ್ದ ಸಂಸ್ಥೆಯ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಆ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ.

ಗೊಗೋಯ್‌ ವಾಸವಿದ್ದ ಸ್ಥಳ, ಆತನ ಪೂರ್ವಪರದ ಬಗ್ಗೆ ವರದಿ ನೀಡುವಂತೆ ಕೇಂದ್ರ ಗೃಹ ಇಲಾಖೆಯು ರಾಜ್ಯ ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡಿದೆ. ಈ ಹಿನ್ನೆ°ಲೆಯಲ್ಲಿ ಬೆಂಗಳೂರು ಪೊಲೀಸರು ಈಶಾನ್ಯ ರಾಜ್ಯ ವಾಸಿಗಳ ಮೇಲೆ ಹೆಚ್ಚಿನ ನಿಗಾ ಇರಿಸಿದ್ದಾರೆ. ಈ ನಡುವೆ ಬೆಂಗಳೂರು, ಹೊರವಲಯ ಹಾಗೂ ಇತರ ಜಿಲ್ಲೆಗಳಲ್ಲಿ ಶಂಕಿತ ಈಶಾನ್ಯ ರಾಜ್ಯಗಳ ತೀವ್ರವಾದಿ ಸಂಘಟನೆಗಳತ್ತ ಒಲವುಳ್ಳವರು ಅಡಗುತಾಣವನ್ನಾಗಿ ಮಾಡಿಕೊಂಡಿದ್ದಾರೆ ಎಂಬ ವಿಚಾರವನ್ನು ಕೇಂದ್ರ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿದು ಬಂದಿದೆ.

ಅಸ್ಸಾಂನ ಉಲ್ಫಾ ಸಂಘಟನೆ ಸೇರಿರುವ ಅಭಿಜಿತ್‌, ನಿಷೇಧಿತ ಉಲ್ಫಾ ಸಂಘಟನೆಗೆ ಸೇರಲು ಕಾರಣ ಏನು, ಈ ಹಿಂದಿನಿಂದಲೂ ಆತ ” ಉಲ್ಫಾ’ ಸಂಘಟನೆ ಜತೆ ನಿರಂತರ ಸಂಪರ್ಕ ಸಾಧಿಸಿದ್ದನೇ, ಉಲ್ಫಾ ಮುಖ್ಯಸ್ಥರ ಸೂಚನೆ ಮೇರೆಗೆ ನಗರದಲ್ಲಿದ್ದುಕೊಂಡೇ ಅಸ್ಸಾಂನಲ್ಲಿ ಸಂಘಟನೆ ನಡೆಸಿದ ಕೃತ್ಯಗಳಲ್ಲಿ ಪಾಲ್ಗೊಂಡಿದ್ದನೇ ಎಂಬುದರ ಬಗ್ಗೆ ಪ್ರಾಥಮಿಕ ತನಿಖೆ ನಡೆಸುತ್ತಿದೆ.

“ಉಗ್ರರ ಅಡಗು ತಾಣ’ ಆಗುತ್ತಿದೆಯೇ ರಾಜ್ಯ
ಇಂಡಿಯನ್‌ ಮುಜಾಹಿದೀನ್‌ (ಐ.ಎಂ) ಸಂಘಟನೆಯಿಂದ ಹಿಡಿದು ತುಮಕೂರಿನಲ್ಲಿ ಆಶ್ರಯ ಪಡೆದಿದ್ದ ಸಿಮಿ ಉಗ್ರರ ಬಂಧನ, ಚರ್ಚ್‌ಸ್ಟ್ರೀಟ್‌ ನಲ್ಲಿ ನಡೆದ ಸ್ಫೋಟ ಪ್ರಕರಣದ ಆರೋಪಿ ಆಲಂ ಆಫ್ರಿದಿ ಕೂಡ ಬೆಂಗಳೂರಿನಲ್ಲಿ ವಾಸವಿದ್ದ. ಐಸಿಸ್‌ ಪರ ಸಂದೇಶಗಳ ಪ್ರಕಟಿಸುತ್ತಿದ್ದ ಬಿಹಾರದ ಟೆಕ್ಕಿ ಮೆಹದಿ ಮಸೂÅಸ್‌ ಬಿಸ್ವಾಸ್‌, ಕಳೆದ ಆಗಸ್ಟ್‌ನಲ್ಲಿ ರಾಮನಗರದಲ್ಲಿ ಸೆರೆಸಿಕ್ಕ ಜೆಎಂಬಿ ಉಗ್ರ ಜಹೀಲುªಲ್‌ ಇಸ್ಲಾಂ ಅಲಿಯಾಸ್‌ ಕೌಸರ್‌ ಸೇರಿ ಹಲವರು ರಾಜ್ಯದಲ್ಲಿಯೇ ಆಶ್ರಯ ಪಡೆದುಕೊಂಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos