ಯುಕೆಯಲ್ಲೂ ‘ಐಲವ್ ಯು’ ಸದ್ದು!

ಯುಕೆಯಲ್ಲೂ ‘ಐಲವ್ ಯು’ ಸದ್ದು!

ಬೆಂಗಳೂರು, ಜು. 3: ನಟ ಉಪೇಂದ್ರ ,ಆರ್. ಚಂದ್ರು ನಿರ್ದೇಶಿಸಿರುವ ಐ ಲವ್ ಯು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ.
ಅಮೆರಿಕಾದ 15 ಸ್ಕ್ರೀನ್ ಗಳಲ್ಲಿ ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಸಂಗೀತ ನಿರ್ದೇಶಕ ಕಿರಣ್ ಅವರಿಗೆ ನೀಡಲಾಗಿದೆ. ಇದರ ಜೊತೆಗೆ ಯುಕೆ ಯಲ್ಲೂ ಕೂಡ 20 ಸ್ಕ್ರೀನ್ ಗಳಲ್ಲಿ ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಎರಡು ದೇಶಗಳಲ್ಲೂ ಸಿನಿಮಾ ರಿಲೀಸ್ ಮಾಡಲು ಪ್ರತ್ಯೇಕ ಹಂಚಿಕೆದಾರರಿಗೆ ಹೊಣೆದಾರಿಕೆ ನೀಡಲಾಗಿದೆ. ರಚಿತಾ ರಾಮ್ ಮತ್ತು ಸೋನುಗೌಡ ನಟಿಸಿರುವ ಐ ಲವ್ ಯು ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿದೆ, ಇನ್ನೂ ನಿರ್ದೇಶಕ ಆರ್ ಚಂದ್ರು ತಮಿಳಿನಲ್ಲಿ ಸಿನಿಮಾ ಮಾಡಲು ಚಿಂತಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos