ಉಗ್ರರ ಗುಂಡಿನ ದಾಳಿ ಹೆಣ್ಣು ಮಗು ಸೇರಿ ನಾಲ್ವರಿಗೆ ಗಾಯ

ಉಗ್ರರ ಗುಂಡಿನ ದಾಳಿ ಹೆಣ್ಣು ಮಗು ಸೇರಿ ನಾಲ್ವರಿಗೆ ಗಾಯ

ಸೊಪೋರ್, ಸೆ.7 : ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಹೆಣ್ಣು ಮಗು ಸೇರಿ ಒಟ್ಟು 4 ಜನರಿಗೆ ಗಂಭೀರ ಗಾಯವಾಗಿರುವ ಘಟನೆ ಶನಿವಾರ ಸೊಪೋರ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಸೊಪೋರ್ ಜಿಲ್ಲೆ ದಂಗೇರ್ಪೊರಾ ಪ್ರದೇಶದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉಸ್ಮಾ ಜಾನ್ ಗಾಯಗೊಂಡಿರುವ ಹೆಣ್ಣು ಮಗು. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos