ಭಾರತದ ‘ಬ್ರಹ್ಮಾಸ್ತ್ರ’ ‘ರಿಸ್ಯಾಟ್-2 ಬಿ’ ಯಶಸ್ವಿ ಉಡಾವಣೆ..!

ಭಾರತದ ‘ಬ್ರಹ್ಮಾಸ್ತ್ರ’ ‘ರಿಸ್ಯಾಟ್-2 ಬಿ’ ಯಶಸ್ವಿ ಉಡಾವಣೆ..!

ತಿರುಮಲ, ಮೇ. 22,ನ್ಯೂಸ್ ಎಕ್ಸ್ ಪ್ರೆಸ್ಹಲವು ಸಾಧನೆ ಮತ್ತು ವಿಕ್ರಮಗಳಿಗೆ ಸಾಕ್ಷಿಯಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಇಂದು ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳ ಗಡಿ ಒಳನುಸುಳುವ ಉಗ್ರರ ಚಲನವಲನದ ಮೇಲೆ ಸರ್ವಋುತುಗಳಲ್ಲೂ ತೀವ್ರ ನಿಗಾ ಇಡುವ, ಗಡಿಯ ಪಕ್ಕದಲ್ಲಿರುವ ಭಯೋತ್ಪಾದಕರ ಅಡಗುತಾಣಗಳನ್ನು ಪತ್ತೆ ಹಚ್ಚುವ ಉಪಗ್ರಹವೊಂದನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಉಪಗ್ರಹ ಉಡಾವಣೆ  ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ಮುಖ್ಯಸ್ಥ ಕೆ. ಶಿವನ್‌ ಅವರು ಪಿಎಸ್‌ಎಲ್‌ವಿ ರಾಕೆಟ್‌ನ ಪ್ರತಿಕೃತಿಯೊಂದಿಗೆ ತಿರುಮಲ- ತಿರುಪತಿಗೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ್ರು.

‘ರಿಸ್ಯಾಟ್‌ 2 ಬಿಆರ್‌ 1’ (ರಾಡಾರ್‌ ಇಮೇಜಿಂಗ್‌ ಸ್ಯಾಟಲೈಟ್‌) ಎಂಬ ಹೆಸರಿನ ಈ ಉಪಗ್ರಹವನ್ನು ಹೊತ್ತು ಆಂಧ್ರಪ್ರದೇಶದ ಶ್ರೀಹರಿಕೋಟ ಬಾಹ್ಯಾಕಾಶ ನೆಲೆಯಿಂದ ಪಿಎಸ್‌ಎಲ್‌ವಿ- ಸಿ 46 ರಾಕೆಟ್‌  ಮುಂಜಾನೆ 5.27ಕ್ಕೆ ನಭೋಮಂಡಲದತ್ತ ಚಿಮ್ಮಿದ್ದು, ಇದಕ್ಕಾಗಿ ನಸುಕಿನ ಜಾವ 4.30ರಿಂದಲೇ ಕ್ಷಣಗಣನೆ ಶುರುವಾಗಿತ್ತು. ಈ ಹಿಂದೆ ಆಪ್ಟಿಕಲ್‌ ಹಾಗೂ ಸ್ಪೆಕ್ಟ್ರಲ್‌ ಸೆನ್ಸರ್‌ಗಳನ್ನು ಬಳಸಿ ಸರ್ವೇಕ್ಷಣಾ ಉಪಗ್ರಹಗಳನ್ನು ಅಭಿವೃದ್ಧಿಪಡಿಸಲಾಗುತ್ತಿತ್ತು. ಆದರೆ ಮೋಡ ಆವರಿಸಿದರೆ, ನಿಗಾ ಇಡಲು ಕಷ್ಟವಾಗುತ್ತಿತ್ತು.

 

 

ಫ್ರೆಶ್ ನ್ಯೂಸ್

Latest Posts

Featured Videos