ಉದ್ಯಮಿ ಪಾಲುದಾರರ ವಿರುದ್ಧ ಸೆಹ್ವಾಗ್ ಪತ್ನಿ ದೂರು

ಉದ್ಯಮಿ ಪಾಲುದಾರರ ವಿರುದ್ಧ ಸೆಹ್ವಾಗ್ ಪತ್ನಿ ದೂರು

ಮುಂಬೈ , ಜು. 13 : ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪತ್ನಿ ಆರತಿ ಸೆಹ್ವಾಗ್ ಅವರು ತಮ್ಮ ಉದ್ಯಮ ಪಾಲುದಾರರ ವಿರುದ್ಧ ದೂರು ನೀಡಿದ್ದು, 4.5 ಕೋಟಿ ರೂ. ಸಾಲ ಪಡೆಯಲು ನಕಲು ಸಹಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಆರತಿ ಅವರು ಕೃಷಿ ಆಧಾರಿತ ಕಂಪನಿಯಲ್ಲಿ ಪಾಲುದಾರರಾಗಿದ್ದು, ಸಂಸ್ಥೆಯ ಇತರೇ ಪಾಲುದಾರರು ತಮ್ಮ ಅರಿವಿಗೆ ಬಾರದೆಯೇ ತಮ್ಮ ಸಹಿ ನಕಲು ಮಾಡಿದ್ದಾರೆ. 4.5 ಕೋಟಿ ರೂ. ಸಾಲ ಪಡೆದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಸಾಲ ಪಡೆಯಲು ತಮ್ಮ ಪತಿ ಸೆಹ್ವಾಗ್ ಅವರ ಹೆಸರನ್ನು ಇಬ್ಬರು ಆರೋಪಿಗಳು ಬಳಸಿಕೊಂಡಿದ್ದಾರೆ. ಸಾಲ ನೀಡಿದವರಿಗೆ ಎರಡು ಪೋಸ್ಟ್ ಡೇಟೆಡ್ ಚೆಕ್ ನೀಡಿದ್ದಾರೆ. ಆದರೆ ಅವರು ಸಾಲ ಮರು ಪಾವತಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ವಿವರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos