ಊರುಗಳ ಕಿ.ಮೀ ಅದಲು-ಬದಲು

  • In State
  • August 12, 2020
  • 222 Views
ಊರುಗಳ ಕಿ.ಮೀ ಅದಲು-ಬದಲು

ಗಂಗಾವತಿ : ಜಿಲ್ಲೆಯಲ್ಲಿ ಮುನಿರಾಬಾದ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯ ಅಂತರವನ್ನು ಸೂಚಿಸುವ ಎರಡು ಫಲಕಗಳಿವೆ, ಧಾರ್ಮಿಕ  ಕ್ಷೇತ್ರ ಹುಲಿಯ ರಸ್ತೆಯ ಅಳವಡಿಸಿರುವ ಈ ಫಲಕಗಳಲ್ಲಿ, ಹಲವಾರು ವ್ಯತ್ಯಾಸಗಳು ಕಂಡು ಬಂದಿದೆ.

ಕಿ.ಮೀ ಸೂಚಿಸುವ ಎರಡು ಫಲಕಗಳನ್ನು ತೋಟಗಾರಿಕೆ ಇಲಾಖೆಯ ಎದುರುಗಡೆ ಹಾಕಲಾಗಿದ್ದು, ಒಂದು ಫಲಕದಲ್ಲಿ ಗಂಗಾವತಿ ತಲುಪುವ ಅಂತರ 40 ಕಿ.ಮೀ ಎಂದು ಬರೆದರೆ ಇನ್ನೊಂದು ಫಲಕದಲ್ಲಿ 36 ಕಿ.ಮೀ ಎಂದು ಬರೆಯಲಾಗಿದೆ.

ಅದೇ ರೀತಿಯಾಗಿ ಅಕ್ಕ ಪಕ್ಕದಲ್ಲಿಯೇ ಅಳವಡಿಸಿರುವ ಈ ಫಲಕಗಳಲ್ಲಿ ಈ ರೀತಿಯ ವ್ಯತ್ಯಾಸಗಳು ಹಾಸ್ಯಾಸ್ಪದ, ಇದು ಅಧಿಕಾರಿಗಳ ಬೇಜವಾಬ್ದಾರಿಗೆ ಮೂಲಕ ಸಾಕ್ಷಿಯಾಗಿದೆ.

ಇಂಗ್ಲಿಷ್ ಮತ್ತು ಕನ್ನಡ ಭಾಷೆ ಎರಡರಲ್ಲಿಯೂ ಬರೆಯಲಾದ ಹುಲಿಗಿ ಮತ್ತು ಗಂಗಾವತಿ ಹೆಸರಿನಲ್ಲಿ ಕೂಡ ಬದಲಾವಣೆಯಾಗಿದೆ. ಅಂತರದ ವ್ಯತ್ಯಾಸ ಇರುವುದರಿಂದ ಪ್ರವಾಸಿಗರು ಗೊಂದಲಕ್ಕೀಡಾಗುತ್ತಾರೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಾಗಿದೆ ಎಂದು ಅಶೋಕ್ ಸ್ವಾಮಿ ಹೇರೂರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos