ಟಿ20 ತಂಡಕ್ಕೆ ಶಫಾಲಿ ಎಂಟ್ರಿ!

ಟಿ20 ತಂಡಕ್ಕೆ ಶಫಾಲಿ ಎಂಟ್ರಿ!

ನವದೆಹಲಿ, ಸೆ. 6 : ಇತ್ತೀಚೆಗೆ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಟಿ20 ಕ್ರಿಕೆಟಿಗೆ ವಿದಾಯ ಘೋಷಿಸಿದ ಬಳಿಕ ಯುವ ಆಟಗಾರ್ತಿಗೆ ಆಯ್ಕೆ ಸಮಿತಿ ಮಣೆ ಹಾಕಿರುವುದು ವಿಶೇಷ. ಹರ್ಯಾಣದ 15ರ ಹರೆಯದ ಬ್ಯಾಟ್ಸ್ ಮನ್ ಶಫಾಲಿ ವರ್ಮ ಭಾರತದ ವನಿತಾ ಟಿ20 ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಸರಣಿಯ ಮೊದಲ 3 ಮುಖಾಮುಖಿಯಾಗಳಲ್ಲಿ ಶಫಾಲಿಗೆ ಅವಕಾಶ ನೀಡಲಾಗಿದೆ.
ವನಿತಾ ಟಿ20 ಚಾಲೆಂಜ್ ಸರಣಿಯಲ್ಲಿ ಶಫಾಲಿ ಅಮೋಘ ಪ್ರದರ್ಶನ ನೀಡಿದ್ದರು. ಐಪಿಎಲ್ ವೇಳೆ ನಡೆದ ಸರಣಿಯಲ್ಲಿ ಅವರು ಮಿಥಾಲಿ ರಾಜ್ ನಾಯಕತ್ವದ “ವೆಲಾಸಿಟಿ’ ತಂಡದ ಪರ ಆಡಿದ್ದರು.
ಶಫಾಲಿ ವರ್ಮ ಭಾರತದ ಪರ ಆಡಿದ ಅತೀ ಕಿರಿಯ ಆಟಗಾರ್ತಿಯರಲ್ಲಿ ಒಬ್ಬರಾಗಲಿದ್ದಾರೆ. ದಾಖಲೆ ಗಾರ್ಗಿ ಬ್ಯಾನರ್ಜಿ ಹೆಸರಲ್ಲಿದೆ. ಅವರು 14 ವರ್ಷ, 165ನೇ ದಿನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos