ವಿವಾದದಲ್ಲಿ ಟಿವಿ9… ಪೊಲೀಸರಿಂದ ದಾಳಿ!

ವಿವಾದದಲ್ಲಿ ಟಿವಿ9… ಪೊಲೀಸರಿಂದ ದಾಳಿ!

ಹೈದರಾಬಾದ್, ಮೇ.9, ನ್ಯೂಸ್ ಎಕ್ಸ್ ಪ್ರೆಸ್: ಟಿವಿ9 ಆಫೀಸ್​ ಮೇಲೆ​ ಪೊಲೀಸರು ದಾಳಿ ನಡೆಸಿದ್ದಾರೆ. ಸುದ್ದಿವಾಹಿನಿಯ ಕಚೇರಿ, ಸಿಇಒ ಮತ್ತು ಅವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.  ಟಿವಿ 9 ಚಾನಲ್​ ಷೇರುಗಳ ಮಾರಾಟ, ಮಾಲೀಕತ್ವ ವಿನಿಮಯಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ವಿವಾದ ನಡೆಯುತ್ತಿದೆ. ಇತ್ತೀಚೆಗೆ ಟಿವಿ 9 ತೆಲುಗು ಮಾಧ್ಯಮ ಸಂಸ್ಥೆಯನ್ನು ಅಲಂದಾ ಮೀಡಿಯಾ ನಿರ್ವಹಣೆ ಮಾಡುತ್ತಿತ್ತು. ಆದ್ರೆ ಚಾನೆಲ್​ ನಿರ್ವಹಣೆಗೆ ಸಂಬಂಧಿಸಿದ ಕೆಲ ಪತ್ರಗಳು ನಾಪತ್ತೆಯಾಗಿದ್ದು, ಇನ್ನೂ ಕೆಲ ಪತ್ರಗಳನ್ನು ಫೋರ್ಜರಿ ಮಾಡಲಾಗಿದೆ ಎಂಬ ಆರೋಪವನ್ನು ಅಲಂದಾ ಮೀಡಿಯಾ ಮಾಡಿದೆ.  ಇನ್ನು, ಟಿವಿ9 ಸಿಇಒ ರವಿಪ್ರಕಾಶ್​ ಮೇಲೆ ಅಲಂದಾ ಮಾಧ್ಯಮ ಕಾರ್ಯದರ್ಶಿ ಕಾಶಿಕ್​ ರಾವು ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಪೊಲೀಸರು ಟಿವಿ9 ಕಚೇರಿ ಮತ್ತು ಸಿಇಒ ರವಿಪ್ರಕಾಶ್​ ಮನೆ ಮೇಲೆ ದಾಳಿ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos